ಭಾರತೀಯ ಅಂಚೆ ಇಲಾಖೆಯು ಗೃಹಿಣಿಯರು ಮತ್ತು ಹಿರಿಯ ನಾಗರಿಕರಿಗೆ ಖುಷಿಯ ಸುದ್ದಿ ನೀಡಿದೆ.

ಸುರಕ್ಷಿತ ಹೂಡಿಕೆಗಳು ಎಂದೇ ಎನ್ನಲಾದ ಅಂಚೆ ಕಚೇರಿ ಯೋಜನೆಗಳನ್ನು ಈಗ ಸರ್ಕಾರ ಹೂಡಿಕೆಯ ಮಿತಿಯನ್ನು ಹೆಚ್ಚಿಸಿದೆ. ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕಿಮ್‌ನಲ್ಲಿ ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಹಾಗೆಯೇ, ನಿಯಮಿತ ಆದಾಯ ನೀಡುವ ಮಾಸಿಕ ಆದಾಯ ಯೋಜನೆಯಲ್ಲಿ (MIS) ಜಂಟಿ ಖಾತೆಯಡಿ ಹೂಡಿಕೆ ಮಿತಿಯನ್ನು 9 ಲಕ್ಷದಿಂದ 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.




