ಬಂಟ್ವಾಳ: ಪ್ರಪುಲ್ ರೈ ಅವರು ಬಂಟ್ವಾಳ ವಲಯ ಅರಣ್ಯಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಶನಿವಾರ ಸಂತೆಯ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಪುಲ್ ರೈ ಅವರು ಅ.5 ರಂದು ಗುರುವಾರ ಸಂಜೆ ಬಂಟ್ವಾಳದಲ್ಲಿ ಕರ್ತವ್ಯಕ್ಕೆ ಹಾಜರಾದರು.
ಬಂಟ್ವಾಳ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್ ಬಳಿಗಾರ್ ಅವರು ಮಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಪುಲ್ ರೈ ಅವರನ್ನು ಬಂಟ್ವಾಳಕ್ಕೆ ಅದೇಶ ಮಾಡಲಾಗಿತ್ತು.