ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪ್ರಫುಲ್ಲ ಗಣೇಶ್ ರವರಿಗೆ IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾದಿಂದ ಗ್ಲೋಬಲ್ ಬೆಸ್ಟ್ ವುಮೆನ್ ಟೀಚರ್ ಅವಾರ್ಡ್-2025

Share with




ಪುತ್ತೂರು:  ಅಬಾಕಸ್ ಮತ್ತು ವೇದ ಗಣಿತದಲ್ಲಿ ಸ್ಥಿರವಾದ ಉನ್ನತ ಸಾಧನೆಯನ್ನು ಗುರುತಿಸಿ  ಜಾಗತಿಕ ಅತ್ಯುತ್ತಮ ಮಹಿಳಾ ಶಿಕ್ಷಕಿ ಅವಾರ್ಡ್ -2025 ಅನ್ನು  IMRF ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಇಂಡಿಯಾ, ವಿಜಯವಾಡ ಇವರು ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು. 
2021ರಲ್ಲಿ ಇಂಟರ್ನ್ಯಾಷನಲ್ ಅವಾರ್ಡ್, 2022ರಲ್ಲಿ 2 ಸಲ ನ್ಯಾಷನಲ್ ಅವಾರ್ಡ್, 2023ರಲ್ಲಿ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿ, 2023ರಲ್ಲಿ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್. 2024ರಲ್ಲಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 106 ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದ ಗೌರವ ಐ.ಆರ್.ಸಿ.ಎಂ.ಡಿ ಸಂಸ್ಥೆಗೆ ಸಲ್ಲುತ್ತದೆ. ಪುತ್ತೂರಿಗೆ ಮೊದಲ ಬಾರಿಗೆ ಅಬಾಕಸ್ ಶಿಕ್ಷಣವನ್ನು ಬಹಳ ಸೃಜನಶೀಲ ಮತ್ತು ವಿಶಿಷ್ಟ ಕೌಶಲ್ಯಗಳೊಂದಿಗೆ (Visualization) ಕೇವಲ ಆಫ್ ಲೈನ್ ಮೂಲಕ ಮಾತ್ರವೇ ಪರಿಚಯಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ 20 ಕ್ಕೂ ಅಧಿಕ ಕೂಡುವಿಕೆ ಮತ್ತು ಕಳೆಯುವಿಕೆ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ತ್ವರಿತ ಉತ್ತರವನ್ನು ಹೇಳಿಸುವ ವಿಡಿಯೋಗಳನ್ನು ಮೊದಲ ಬಾರಿಗೆ ಪುತ್ತೂರಿಗೆ ಪರಿಚಯಿಸಿದ್ದು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಾಗಿದೆ.

ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯು ಅಬಾಕಸ್‌ನ ಜೊತೆಗೆ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ, ವೇದ ಗಣಿತ, ಬ್ಯಾಂಕಿಂಗ್  ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ಸಮಗ್ರ ತರಬೇತಿಯನ್ನು ಪುತ್ತೂರು ಮತ್ತು ಸುಳ್ಯದಲ್ಲಿ ನೀಡುತ್ತಿದೆ. ಈ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸುವವರು 9945988118  ನಂಬರಿಗೆ ನೇರವಾಗಿ ಸಂಪರ್ಕಿಸಬಹುದು ಎಂದು ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *