ಅಕ್ಷಯ ಸಮೂಹ ಸಂಸ್ಥೆಗಳ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ “ಪ್ರಜ್ಞಾನಮ್” ಸಂಸ್ಕೃತ ತರಬೇತಿ

Share with

ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ,ಸಂಸ್ಕೃತ ವಿಭಾಗ ಹಾಗೂ ‘ಅಧ್ಯಯ” ಸಾಹಿತ್ಯ ಸಂಘ ಇದರ ಆಶ್ರಯದಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕೆ ಹೊಸತಾಗಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಮತ್ತು ಈ ವರ್ಷದಿಂದ ಕಾರ್ಯನಿರ್ವಹಿಸಲಿರುವ ಹೊಸ ಸಂಸ್ಥೆ ಅಕ್ಷಯ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಸಂಸ್ಕೃತ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣದ ಸವಾಲುಗಳ ಅರಿವು ಮೂಡಿಸುವ ಸಲುವಾಗಿ, ‘ಪ್ರಜ್ಞಾನಮ್’ ಅರಿವು ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಪ್ರಾಂಶುಪಾಲರಾದ ಕುಮಾರಿ ಗಂಗಾ ರತ್ನ ಅವರು ಕಾರ್ಯಕ್ರಮವನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳ ಉದ್ದೇಶವನ್ನು ತಿಳಿಯಪಡಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ ಇವರು ವಹಿಸಿ ಮಾತನಾಡಿ, ಸಂಸ್ಕೃತದ ಬಳಕೆ ಎಲ್ಲಾ ಭಾಷೆಗಳಲ್ಲೂ ಕಾಣಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ ಮುಖ್ಯ ಅತಿಥಿ ಆಗಿ ಆಗಮಿಸಿದ ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ ಮಾತನಾಡಿ ಸಂಸ್ಕೃತದ ಮಹತ್ವದ ಬಗ್ಗೆ ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಆಲೋಷಿಯಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಸುರೇಖಾ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬೇಕಾದ ಜೀವನ ಮೌಲ್ಯಗಳು ಹಾಗೂ ಶೈಕ್ಷಣಿಕ ಸವಾಲುಗಳನ್ನು ಸಂಸ್ಕೃತದಲ್ಲಿ ಕಾಣಬಹುದು ಎಂದು ಮಾಹಿತಿ ನೀಡಿದರು.

ರಮ್ಯಶ್ರೀ ಪ್ರಾರ್ಥಿಸಿದರು. ರಕ್ಷಾ.ಟಿ ಆರ್ ಸ್ವಾಗತಿಸಿ, ಆಯುಷ್ ಶೆಟ್ಟಿ ವಂದಿಸಿದರು.

ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥೆ ಸಾಯಿ ಕೃಪಾ ಕೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಅಪೇಕ್ಷಾ.ಟಿ ಶೆಟ್ಟಿ ದ್ವಿತೀಯ ಬಿಸಿಎ, ಕಾರ್ಯಕ್ರಮವನ್ನು ನಿರ್ವಹಿಸಿದ್ದರು.


Share with

Leave a Reply

Your email address will not be published. Required fields are marked *