ಬಿಲ್ಲವ ಸಮುದಾಯದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ; ಪ್ರಣವಾನಂದ ಸ್ವಾಮೀಜಿ

Share with

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ 500 ಕೋ.ರೂ. ಬಿಡುಗಡೆ, ಬಿಲ್ಲವ ಸಮಾಜವನ್ನು ಈಗಿರುವ 2ಎ ಯಿಂದ ಎಸ್ ಟಿ ಮೀಸ ಲಾತಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡುವುದೂ ಸೇರಿದಂತೆ ಪ್ರಮುಖ ಹಾಗೂ ದೀರ್ಘಕಾಲಿಕ ಬೇಡಿಕೆಗಳನ್ನು ಮುಂದಿರಿಸಿ 41 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕರದಾಳ ಪೀಠಾಧಿಪತಿ ಡಾ| ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿ ದಂತೆ 26 ಪಂಗಡಗಳ ಬೇಡಿಕೆಗಳ ಈಡೇರಿಕೆಗಾಗಿ ಅವುಗಳ ಮುಖಂಡರ ಬೆಂಬಲದಡಿ 2026 ರ ಜನವರಿ 6 ರಿಂದ ಕರದಾಳದಿಂದ ಬೆಂಗಳೂರು ವರೆಗೆ 41 ದಿನಗಳ 700 ಕಿ.ಮೀ ನ ಐತಿಹಾಸಿಕ ಪಾದಯಾತ್ರೆ ನಡೆಯ ಲಿದೆ ಎಂದರು.

ಕುಲಕಸುಬು ಕಳೆದು ಕೊಂಡ ಈಡಿಗರಿಗೆ ಭೂಮಿ ಮಂಜೂರು, ಬೆಂಗಳೂರಿನ ವಿಧಾನ ಸೌಧ ಎದುರು ನಾರಾಯಣಗುರುಗಳ ಪುತ್ಥಳಿ ಸ್ಥಾಪನೆ ಸೇರಿದಂತೆ ಬೇಡಿಕೆಗಳನ್ನು ಅವರು ಉಲ್ಲೇಖೀಸಿದರು.

ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿರುವ ಮೊಕ ದ್ದಮೆಗಳನ್ನು ಹಿಂತೆಗೆದು ದೇವ ಸ್ಥಾನಕ್ಕೆ ಭದ್ರತೆ ಒದಗಿಸಬೇಕು, ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗೆ ಪ್ರತಿ ಬಜೆಟ್‌ನಲ್ಲಿ ಸಮರ್ಪಕ ಅನುದಾನ ನೀಡಬೇಕು, ವಿಶ್ವವಿದ್ಯಾಲಯಗಳಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಹಾಗೂ ಹೆಂಡದ ಮಾರಯ್ಯ ಜಯಂತಿ ಯನ್ನು ಅಧಿಕೃತವಾಗಿ ಆಚರಿಸುವಂತೆ ಸರಕಾರಕ್ಕೆ ಮನವಿ ಮಾಡಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಡು ವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದ ಅವರು, ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ರಾಜ್ಯದಲ್ಲಿ ಶೇಂದಿ ಇಳಿಕೆಗೆ ನಿಷೇಧವಿದೆ. ಹಾಗಾಗಿ ನಮ್ಮ ಸಮುದಾಯದವರು ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ ಮದ್ಯವ್ಯಾಪಾರದದಲ್ಲಿ ನಮ್ಮ ಪಂಗಡದವರಿಗೆ ಮೀಸಲು ಕೊಡಿ. ಒಂದುವೇಳೆ ಮದ್ಯ ಬೇಡವೆಂದಾದರೆ ಪಬ್, ಬಾರ್ ಎಲ್ಲವನ್ನೂ ಬಂದ್ ಮಾಡಿ ಎಂದು ಆಗ್ರಹಿಸಿದರು.


Share with

Leave a Reply

Your email address will not be published. Required fields are marked *