ಉಪ್ಪಳ: ಶ್ರೀ ಗೌರೀ ಗಣೇಶ ಭಜನಾ ಮಂದಿರ ಶಿವಶಕ್ತಿ ಮೈದಾನ ಪ್ರತಾಪನಗರ ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ, ೭ನೇ ವರ್ಷದ ಭಜನೋತ್ಸವ ಹಾಗೂ ೪೧ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶನಿವಾರ ಸಂಜೆ ಗಣೇಶ ಮಂದಿರದಲ್ಲಿ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷ ದುಗ್ಗಪ್ಪ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಲೀಲಾಧರ ಆಚಾರ್ಯ, ಕೋಶಾಧಿಕಾರಿ ನಾರಾಯಣ ಮಣಿಯಾಣಿ, ಗೌರವಾಧ್ಯಕ್ಷ ಶಿವಾನಂದ ಆಚಾರ್ಯ ಉಪಸ್ಥಿತರಿದ್ದರು. ಪುರುಶೋತ್ತಮ ಪ್ರತಾಪನಗರ ರವರು ಆಮಂತ್ರಣ ಪತ್ರಿಕೆಯನ್ನು ಮನೆಗಳಿಗೆ ವಿತರಿಸುವ ಬಗ್ಗೆ ತಂಡವನ್ನು ರಚಿಸಿ ಮಾಹಿತಿಯನ್ನು ನೀಡಿದರು. ಲೀಲಾಧರ ಆಚಾರ್ಯ ಸ್ವಾಗತಿಸಿ, ಅನಿಲ್ ಕುಮಾರ್ ವಂದಿಸಿದರು. ಸಮಿತಿಯ ಇತರ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸೆಪ್ಟಂಬರ್ ೪ರಿಂದ ೮ರ ತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ನಡೆಯಲಿದೆ.