ಕಾಸರಗೋಡು : ಇಲ್ಲಿನ ಕರಂದಕ್ಕಾಡು ಶಿವಾಜಿನಗರದ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ 9 ನೇ ಪ್ರತಿಷ್ಠಾ ವಾರ್ಷಿಕೋತ್ಸವವು ಮಾಯಿಪ್ಪಾಡಿ ತಂತ್ರಿವರ್ಯ ಬ್ರಹ್ಮಶ್ರೀ ಮಾಧವ ಆಚಾರ್ಯ ಅವರ ಪುತ್ರ ಪುರೋಹಿತ ಶ್ರೀ ಕೇಶವ ಆಚಾರ್ಯರ ನೇತೃತ್ವದಲ್ಲಿ 13.6.24 ರಂದು ಜರಗಿತು. ಸಂಜೆ 6 ಗಂಟೆಗೆ ದೀಪ ಪ್ರತಿಷ್ಠೆ, ಭಜನೆ ಸಂಕೀರ್ತನೆ ಪ್ರಾರಂಭವಾಗಿ ರಾತ್ರಿ 8 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಲಘು ಉಪಹಾರ ವ್ಯವಸ್ಥೆ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.