ಕೊಂಡೆವೂರು ಮಠದಲ್ಲಿ ಪ್ರತಿಷ್ಠಾವರ್ಧಂತಿ, ನವಚಂಡಿಕಾ ಯಾಗ

Share with

ದಿನಾಂಕ 22-02-2026 ಆದಿತ್ಯವಾರ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣನವರ ಆಚಾರ್ಯತ್ವದಲ್ಲಿ, ವೇದಮಾತೆ ಶ್ರೀ ಗಾಯತ್ರೀ ದೇವಿಯ ಭಗವಾನ್‌ ಶ್ರೀ ನಿತ್ಯಾನಂದ ಗುರುದೇವರ “ಪ್ರತಿಷ್ಠಾ ವರ್ಧಂತ್ಯುತ್ಸವ“ “ನವಚಂಡಿಕಾ ಯಾಗ“ ವೇದಮಾತೆ ಶ್ರೀ ಗಾಯತ್ರೀ ದೇವಿಯ ಗರ್ಭಗೃಹದ ಜೀರ್ಣೋದ್ದಾರಕ್ಕೆ ನಿಧಿ ಸಮರ್ಪಣೆ ಹಾಗೂ 20 ನೇ ವರ್ಷದ ಅಖಂಡ ಭಜನಾ ಸಪ್ತಾಹ ದಿನಾಂಕ 22-02-2026 ಸೂರ್ಯಾಸ್ತದಿಂದ 01.03.2026 ಸೂರ್ಯಾಸ್ತದವರೆಗೆ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಂದ ಜರಗಲಿರುವುದು. ಆದಿನ ಪ್ರಾತಃ 7ರಿಂದ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಶ್ರೀ ಗಾಯತ್ರೀ ದೇವಿಗೆ ಪಂಚವಿಂಶತಿ ಕಲಶಾಧಿವಾಸ, ಅಧಿವಾಸ ಹೋಮ, ಶ್ರೀ ನಿತ್ಯಾನಂದ ಗುರುಗಳಿಗೆ ನವಕ ಕಲಶಾಧಿವಾಸ, ಪ್ರಾತಃ 7.30ಕ್ಕೆ ಚಂಡಿಕಾ ಯಾಗ ಪ್ರಾರಂಭ, ಪೂರ್ವಾಹ್ನ 10:30 ಕ್ಕೆ ಚಂಡಿಕಾ ಯಾಗ ಪೂರ್ಣಾಹುತಿ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಾಯಂಕಾಲ 6:30ಕ್ಕೆ ನಕ್ಷತ್ರವನದಲ್ಲಿ ನವಗ್ರಹ ಪೂಜೆ, ದೀಪೋತ್ಸವ ರಾತ್ರಿ 9:00 ಕ್ಕೆ ರಾತ್ರಿ ಪೂಜೆ, ಪ್ರಸಾದ ವಿತರಣೆ ಪ್ರಸಾದ ಭೋಜನ ಮುಂತಾದ ಕಾರ್ಯಕ್ರಮಗಳು ಜರಗಲಿರುವುದು.

ಪೂರ್ವಾಹ್ನ 11 ಕ್ಕೆ ಜರಗುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ಮಾಡಲಿರುವರು. ಕಟೀಲಿನ ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಮಾಜಿ ರಾಜ್ಯ ಸಭಾ ಸದಸ್ಯರಾದ ಡಾ.ಕೆ.ಸಿ.ರಾಮಮೂರ್ತಿ,IPS(Retd)  ವಹಿಸಲಿರುವರು. ಡಾ.ಎಸ್.ಎನ್.ವಿ.ಎಲ್.ನರಸಿಂಹ ರಾಜು, (Chairman THE OXFORD EDUCATIONAL INSTITUTIONS BENGALURU) ನಿಧಿ ಸಮರ್ಪಣೆಗೆ ಚಾಲನೆ ನೀಡಲಿರುವರು. ಈ ಸಂದರ್ಭದಲ್ಲಿ  2026 ರ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಎಸ್‌.ಜಿ.ಸುಶೀಲಮ್ಮ ಬೆಂಗಳೂರು ಇವರನ್ನು ಸನ್ಮಾನಿಸಲಾಗುವುದು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಕೆ. ನಾರಾಯಣ, ಬೆಂಗಳೂರು (ಮಾನ್ಯ ರಾಜ್ಯ ಸಭಾ ಸದಸ್ಯರು) ಶ್ರೀ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ (ಚೆಯರ್‌ಮ್ಯಾನ್,ಹೇರಂಭಾ ಇಂಡಸ್ಟ್ರೀಸ್‌ ಮುಂಬೈ) ಶ್ರೀ ಕೆ.ಕೆ.ಶೆಟ್ಟಿ  (ಆಡಳಿತ ಮೊಕ್ತೇಸರರು, ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮುಂಡಪಳ್ಳ) ಶ್ರೀ ರಘುರಾಮ್.ಕೆ ಶೆಟ್ಟಿ ಕುಳೂರು ಕನ್ಯಾನ   (ಎಂ.ಡಿ, ಹೇರಂಭಾ ಇಂಡಸ್ಟ್ರೀಸ್‌ ಮುಂಬೈ)  ಡಾ.ಜಿ.ರಮೇಶ್ IPS(Retd) (ಅಧ್ಯಕ್ಷರು ದೇವಾಂಗ ಸಂಘ ಬೆಂಗಳೂರು) ಶ್ರೀ ಬಿ. ನಾಗರಾಜ KAS (ನಿವೃತ್ತ ಜಿಲ್ಲಾಧಿಕಾರಿಗಳು, ಬೆಂಗಳೂರು ) CfCA ಶ್ರೀ ಚಂದ್ರಶೇಖರ್‌ ಶೆಟ್ಟಿ ಮುಂಡ್ಕೂರು (Cf founder President) ಶ್ರೀ ಜಯ ಕೆ.ಶೆಟ್ಟಿ (ಅಧ್ಯಕ್ಷರು ಮಯೂರಿ ಫೌಂಡೇಷನ್‌ ಮುಲ್ಕಿ)  ಶ್ರೀ ಇ.ಎಸ್‌. ರಾಮ್‌ ಭಟ್ ಬೆಂಗಳೂರು (ಗೌರವಾಧ್ಯಕ್ಷರು, ಶ್ರೀ ನಿತ್ಯಾನಂದ ಯೋಗಾಶ್ರಮ ಬೆಂಗಳೂರು ಸಮಿತಿ) ಶ್ರೀ ಎ.ಜೆ ಶೇಖರ್‌ (ಆಡಳಿತ ಮೊಕ್ತೇಸರರು ಶ್ರೀ ಉಮಾಮಹೇಶ್ವರೀ ದೇವಸ್ಥಾನ ಕಾಪಿಕಾಡ್‌), ಶ್ರೀ ಮೋಹನ ಶಟ್ಟಿ ಮಜ್ಜಾರು (ಉದ್ಯಮಿ, ಮುಂಬೈ), ಶ್ರೀ ಶಶಿಧರ ಶೆಟ್ಟಿ ಗ್ರಾಮ ಚಾವಡಿ (ವಿಶ್ವಸ್ಥರು ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್‌ ಚಾರಿಟೇಬಲ್‌ ಟ್ರಸ್ಟ್‌ (ರಿ) , ಶ್ರೀ ಲಕ್ಷ್ಮಣ ರಾಮ್‌ ಬೆಂಗಳೂರು (ಬಾಲಾಜಿ ಪೇಪರ್ಸ್‌ ಬೆಂಗಳೂರು)  ಶ್ರೀ ರಾಜೇಶ್‌ ಕೆ.ರೈ (ಅಧ್ಯಕ್ಷರು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬೈ ಸಮಿತಿ) ಇವರು ಆಗಮಿಸಲಿರುವರು.


Share with

Leave a Reply

Your email address will not be published. Required fields are marked *