ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿ ನೌಷಾದ್ ಪತ್ತೆಗೆ 2 ಲಕ್ಷ ಬಹುಮಾನ

Share with

ಮಂಗಳೂರು: ಕಳೆದ ವರ್ಷ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೊಳಗಾಗಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್.ಐ.ಎ ಆರೋಪಿಯ ಸುಳಿವಿಗೆ 2 ಲಕ್ಷ ಬಹುಮಾನವನ್ನು ಘೋಷಣೆ ಮಾಡಿದೆ.

ಆರೋಪಿ ನೌಷಾದ್ ಪತ್ತೆಗೆ 2 ಲಕ್ಷ ಬಹುಮಾನ.

ಆರೋಪಿ ನಂ.23 ನೌಷಾದ್ ನ ಸುಳಿವಿಗೆ 2 ಲಕ್ಷ ಬಹುಮಾನ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಹಮೀದ್‌ ಮಗ ನೌಷಾದ್ ನಿಷೇದಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತನಾಗಿದ್ದು, ಘಟನೆ ಬಳಿಕ ನೌಷಾದ್ ತಲೆ ಮರೆಸಿಕೊಂಡಿದ್ದರಿಂದ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಇವನ ಪತ್ತೆಗೆ ಇದೀಗ ಎನ್ ಐ ಎ ರಿವಾರ್ಡ್ ನೋಟಿಸ್ ಘೋಷಿಸಿದೆ.


Share with

Leave a Reply

Your email address will not be published. Required fields are marked *