ಉಪ್ಪಳ: ಮೆದುಳಿಗೆ ಸಂಬoಧಿಸಿ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಪ್ರೆಸ್ ಮಾಲಕ ನಿಧನರಾದರು. ಕುಂಬಳೆ ಬಳಿಯ ಆರಿಕ್ಕಾಡಿ ಕೆಳಗಿನ ಮನೆಯ ಪುರೋಹಿತ ರಾಮಕೃಷ್ಣ ಆಚಾರ್ಯ-ಜಯಲಕ್ಷ್ಮಿ ದಂಪತಿಯರ ದ್ವಿತೀಯ ಪುತ್ರ ನಾಗಪ್ರಸಾದ್ ಆಚಾರ್ಯ [35) ಗುರುವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಎರಡು ವಾರಗಳಿಂದ ಮೆದುಳು ಸಂಬoಧಿಸಿ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇವರು ಕುಂಬಳೆ ಪೋಲೀಸ್ ಸ್ಟೇಷನ್ ರಸ್ತೆಯಲ್ಲಿರುವ ಜಯಕೃಷ್ಣ ಫ್ರೆಂಟಿAಗ್ ಪ್ರೆಸ್‌ನ ಮಾಲಕರಾಗಿದ್ದಾರೆ. ಮೃತರು ಪತ್ನಿ ಹರ್ಷಲತ, ಪುತ್ರಿ ಅನುಗ್ರಹ, ಸಹೋದರಾದ ಲಕ್ಷ್ಮೀ ಪ್ರಸಾದ್ ಆಚಾರ್ಯ, ದುರ್ಗಾಪ್ರಸಾದ್ ಆಚಾರ್ಯ, ವಿನಾಯಕ ಆಚಾರ್ಯ ಹಾಗೂ ಅಪಾರ ಬಂಧುಗಳು, ಹಿತೈಷಿಗಳನ್ನು ಅಗಲಿದ್ದಾರೆ.