ಪಾಕ್ ಮಾಜಿ PM ಇಮ್ರಾನ್ ಖಾನ್ ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ, ಇಮ್ರಾನ್ ಅವರನ್ನು ನೋಡಲು ರಾವಲ್ಪಿಂಡಿ ಜೈಲಿಗೆ ಬಂದಿದ್ದ ಸಹೋದರಿಯರನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಅವರು, PTI ಬೆಂಬಲಿಗರೊಂದಿಗೆ ಜೈಲಿನ ಹೊರಗೆ ಪ್ರತಿಭಟಿಸಿದರು.

ಇಮ್ರಾನ್’ರನ್ನು ತೋರಿಸುವಂತೆ ಒತ್ತಾಯಿಸಿದರು. ಅಲ್ಲದೆ, ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇಮ್ರಾನ್ 2023ರಿಂದ ಜೈಲಿನಲ್ಲಿದ್ದಾರೆ.




