ಅಕ್ಷಯ ಕಾಲೇಜಿನಲ್ಲಿ “ಪ್ರಿನ್ಸ್ ಆಂಡ್ ಪ್ರಿನ್ಸೆಸ್” ಗ್ರ್ಯಾಂಡ್ ಫಿನಾಲೆ

Share with



ಅಕ್ಷಯ ಕಾಲೇಜು ಪುತ್ತೂರು ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಕಲಾ ಸಂಘದ ವತಿಯಿಂದ ನಡೆದ *”ಪ್ರಿನ್ಸ್ ಆಂಡ್ ಪ್ರಿನ್ಸೆಸ್”* ಫ್ಯಾಶನ್ ಶೋ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ದಿನಾಂಕ 08 ಫೆಬ್ರವರಿ ,2025 ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಡಿಸೆಂಬರ್ 01 ರಂದು ನಡೆದ ಮೊದಲ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ 260 ಸ್ಪರ್ಧಾಳುಗಳಲ್ಲಿ ಫಿನಾಲೆಗೆ ಆಯ್ಕೆಯಾದ 80 ಸ್ಪರ್ಧಾಳುಗಳು ಭಾಗವಹಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲ್ ನೆರವೇರಿಸಿ “ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು” ಎಂದರು.

3 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 6 ರಿಂದ 10 ವರ್ಷದ ವಿಭಾಗ, 11 ರಿಂದ 14 ವರ್ಷದ ವಿಭಾಗ ಮತ್ತು 15 ರಿಂದ 18 ವರ್ಷದ ವಿಭಾಗದ ಸ್ಪರ್ಧೆ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ವೇದ ಲಕ್ಷ್ಮೀಕಾಂತ್, GL Acharya Jeweller ಪುತ್ತೂರು ಇವರು ಮಾತನಾಡುತ್ತಾ “ಫ್ಯಾಶನ್ ಕ್ಷೇತ್ರದ ಪ್ರತಿಭೆಯ ಅನಾವರಣಕ್ಕಾಗಿ ಪುತ್ತೂರಿನಲ್ಲಿ ಇಂತಹ ಒಂದು ವೇದಿಕೆಯ ಅಗತ್ಯವಿದ್ದು, ಈ ಅಗತ್ಯವನ್ನು ಅಕ್ಷಯ ಕಾಲೇಜು ಇಂದು ಪೂರೈಸಿದೆ ಎಂದರು” . ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಶ್ರೀ ಅಬ್ದುಲ್ ರೆಹಮಾನ್, ಮಾಲಕರು, Adarsh electronics and Furnitures, sampya ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯರು ಶ್ರೀ. ಭೋಜೇಗೌಡ ಇವರು ಕಾಲೇಜಿನ ವತಿಯಿಂದ ನೀಡಿದ ಗೌರವವನ್ನು ಸ್ವೀಕರಿಸಿ ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಚಟುವಟಿಕೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರವಾಗಿರುತ್ತದೆ, ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜಿನ ಈ ಪರಿಶ್ರಮ ಶ್ಲಾಘನೀಯ” ಎಂದರು.

ನಂತರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜೇತರ ಪಟ್ಟಿ-
1st category
Boys- Prince:-
Winner – Rushab Rao
1st runner up – Saanvith.S.Hegde
2 nd Runner up – Advik. A

Girls-Princess:-
Winner – Charvi Ashwin
1st runner up – Kahani Yogish
2 nd Runner up – Amrutha. J. Amin

2nd category
Boys-Prince:-
Winner – Sujan kadaba
1 st runner up- Thanaya jaake gowda
2 nd runner up – Gowtham krishna

Girls-Princess:-
Winner – Rakshitha Nayar
1 st runner up – Chukki Vittal
2 nd runner up – Divika kiran

3rd category
Boys-Prince
Winner – Sterie tom
1 st runner up – Sarthak.J.K
2 nd runner up – Lohith.

Girls-Princess
Winner –  Sthuthi Shetty
1 st runner up – Nisha.C.j
2 nd runner up – Benita Shaina Dsouza.

ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ವಂಡರ್ ಲಾ ವತಿಯಿಂದ ವಿಶೇಷ ಕೂಪನ್ ನೀಡಲಾಯಿತು.ನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ವಂಡರ್ ಲಾ ಆಮ್ಯೂಸ್ಮೆಂಟ್ ಪಾರ್ಕ್ ಇದರ ಡೆವಲಪ್ಮೆಂಟ್ ಮ್ಯಾನೇಜರ್ ಸಂತೋಷ್, ಕಾಲೇಜಿನ ಪ್ರಾಂಶುಪಾಲರು ಶ್ರೀ ಸಂಪತ್. ಕೆ. ಪಕ್ಕಳ. ಕಾಲೇಜಿನ ಆಡಳಿತ ನಿರ್ದೇಶಕ ಶ್ರೀ ಅರ್ಪಿತ್.ಟಿ.ಎ, ಉಪ ಪ್ರಾಂಶುಪಾಲರು ರಕ್ಷಣ್. ಟಿ.ಆರ್, ಕಾರ್ಯಕ್ರಮದ ಸಂಯೋಜಕರು ಶ್ರೀ ಕಿಶನ್.ಎನ್.ರಾವ್, ಫ್ಯಾಷನ್ ಡಿಸೈನ ವಿಭಾಗದ ಮುಖ್ಯಸ್ಥರು ಶ್ರೀಮತಿ ಅನುಷಾ ಪ್ರವೀಣ್, ಅಧ್ಯಾಪಕ ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *