ಗುರುಪುರ: ಖಾಸಗಿ ಬಸ್ಸೊಂದು ಪಲ್ಟಿಯಾಗಿ ಹಲವಾರು ಮಂದಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಜ.2ರಂದು ಸಂಜೆ ಸಂಭವಿಸಿದೆ.


ಸಂಜೆ ಸುಮಾರು 6.30ಗೆ ಈ ಘಟನೆ ನಡೆದಿದ್ದು, ಖಾಸಗಿ ಬಸ್ ಕೈಕಂಬದಿಂದ ಪೊಳಲಿ ಮಾರ್ಗವಾಗಿ ಬಿ.ಸಿರೋಡ್ ಕಡೆಗೆ ತೆರಳುತ್ತಿತ್ತು. ಆದರೆ ಬಸ್ಸು ಕೈಕಂಬ ಪೊಳಲಿ ದ್ವಾರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಎಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.




