ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ಜೊತೆ ಬಾಯಿಗೆ ಬಂದಂತೆ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಮಾತನಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು, ಇಂತಹ ಶಿಕ್ಷಕ ನಮಗೆ ಬೇಡ ಎಂದು ತರಗತಿ ಬಹಿಷ್ಕರಿಸಿ, ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯ ದೊಡ್ಡ ಗಂಜೂರು ಗ್ರಾಮದಲ್ಲಿ ನಡೆದಿದೆ. ಮುಖ್ಯಶಿಕ್ಷಕ ಓಬಯ್ಯ ವಿರುದ್ಧ ವಿದ್ಯಾರ್ಥಿನಿಯರು- ಪೋಷಕರು ಪ್ರತಿಭಟನೆ ನಡೆಸಿ, ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.




