ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ‘ಸಹಯೋಗ್ ಪೋರ್ಟಲ್’ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರ ಐಟಿ ಕಾಯ್ದೆಯಡಿ 1,100ಕ್ಕೂ ಹೆಚ್ಚು URLಗಳನ್ನು ತೆಗೆದು ಹಾಕುವಂತೆ ಆದೇಶವನ್ನು ನೀಡಲಾಗಿದೆ.

ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ‘ಸಹಯೋಗ್ ಪೋರ್ಟಲ್ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರ ಐಟಿ ಕಾಯ್ದೆಯಡಿ ವಿಭಿನ್ನ ಖಾತೆಗಳಿಗೆ ಸಂಬಂಧಿಸಿದ 1,100ಕ್ಕೂ ಹೆಚ್ಚು URLಗಳನ್ನು ತೆಗೆದು ಹಾಕುವಂತೆ ಆದೇಶವನ್ನು ನೀಡಲಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 79(3)(b) ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ ತನ್ನ ಅಂಗ ಸಂಸ್ಥೆಯಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (14C) ಮೂಲಕ ಈ ಆದೇಶಗಳನ್ನು ನೀಡಿದೆ. ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ಸಹಯೋಗ್ ಪೋರ್ಟಲ್ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರವೂ ಐಟಿ ಕಾಯ್ದೆಯಡಿ ಈ ಆದೇಶವನ್ನು ನೀಡಿದೆ.
ಇವುಗಳಲ್ಲಿ ಅರ್ಧದಷ್ಟು (566) ಆದೇಶಗಳನ್ನು ‘ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ” ಅಪರಾಧಕ್ಕಾಗಿ ನೀಡಲಾಗಿದೆ. ಉಳಿದವುಗಳಲ್ಲಿ 124 ಆದೇಶಗಳನ್ನು ರಾಜಕೀಯ ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಗುರಿಪಡಿಸಿರುವುದಕ್ಕಾಗಿ ನೀಡಲಾಗಿದೆ.
2024 ಮಾರ್ಚ್ 20ರಿಂದ 2025 ನವೆಂಬರ್ 7ರ ನಡುವೆ ನೀಡಲಾದ ಈ ನೋಟೀಸ್ ಗಳ ವಿವರಗಳನ್ನು ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್ ಮುಂದೆ ಇಟ್ಟಿದೆ. ಅವುಗಳಲ್ಲಿ 58 ಆದೇಶಗಳನ್ನು ಎಕ್ಸ್ ಗೆ ಕಳೆದ ವರ್ಷ ನೀಡಲಾಗಿದೆ. 24 ಆದೇಶಗಳನ್ನು ಸಾರ್ವಜನಿಕ ಶಾಂತಿಗೆ ಭಂಗ ತರುವುದು ಮತ್ತು ಶತ್ರುತ್ವವನ್ನು ಪ್ರಚೋದಿಸಿರುವುದಕ್ಕಾಗಿ ನೀಡಲಾಗಿದೆ. ಮೂರು ಆದೇಶಗಳಲ್ಲಿ ಪೋಸ್ಟ್ ಮಾಡಲಾದ ವಿಷಯಗಳು ರಾಷ್ಟ್ರೀಯ ಐಕ್ಯತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಕಾರಣ ನೀಡಲಾಗಿದೆ.




