ಉಪ್ಪಳ : ಜೋರಾಗಿ ಸುರಿದ ಭಾರೀ ಮಳೆಗೆ ಸಾರ್ವಜನಿಕ ಬಾವಿ ಕುಸಿದು ಬಿದ್ದ ಘಟನೆ ನಡೆದಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್ ನ 2ನೇ ವಾರ್ಡ್ ಉಪ್ಪಳ ಭಗವತಿ ಗೇಟ್ ಬಳಿಯಲ್ಲಿ ಜುಲೈ 7ರಂದು ಮದ್ಯ ರಾತ್ರಿ ಬಾವಿ ಕುಸಿದು ಬಿದ್ದಿದೆ.
ಬಾವಿಯ ಅವರಗೋಡೆ ಹಾಗೂ ಅದರ ಕಂಬಗಳು ಪೂರ್ತಿ ಬಿದ್ದು ನೆಲ ಸಮ ಗೊಂಡಿದೆ.ಬೆಳಿಗ್ಗೆ ಸ್ಥಳೀಯರು ನೀರು ಸೇದಲು ತಲುಪಿದಾಗ ಗಮನಕ್ಕೆ ಬಂದಿದೆ.ಸುಮಾರು 50 ವರ್ಷಗಳ ಹಿಂದಿನ ಬಾವಿ ಇದಾಗಿದೆ. ಬೇಸಿಗೆ ಹಾಗೂ ಮಳೆ ಗಕದಲ್ಲೂ ಸ್ಥಳೀಯರು ಹಾಗೂ ಪರಿಸರ ನಿವಾಸಿಗಳು ನೀರನ್ನು ಉಪಯೋಗಿಸು ತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ವಾರ್ಡ್ ಜನಪ್ರತಿನಿದಿಯವರಿಗೆ ಮಾಹಿತಿ ನೀಡಿದ್ದಾರೆ.