ಸಕಲೇಶಪುರಕ್ಕೆ  ಲೋಕೋಪಯೋಗಿ ಸಚಿವರಾದ ಜಾರಕಿಹೊಳೆ ಭೇಟಿ .

Share with



ಸಕಲೇಶಪುರ:  ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಆನೆಮಹಲ್, ದೊಡ್ಡತೊಪ್ಪಲು, ದೋಣಿಗಲ್, ಮಾರನಹಳ್ಳಿಯಲ್ಲಿ ಮಳೆಹಾನಿ ಪ್ರದೇಶ ಹಾಗೂ ಗುಡ್ಡ ಕುಸಿತ ಪ್ರದೇಶಕ್ಕೆ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ಭೇಟಿ ನಿಡಿದರು.  ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ಸಕಲೇಶಪುರ ತಾಲೂಕು ಬಾಳ್ಳುಪೇಟೆ ಚಿನ್ನಹಳ್ಳಿ ರಸ್ತೆಯಿಂದ ಮಗ್ಗೆ ಸಂಪರ್ಕಿಸುವ ರಸ್ತೆ ಅತಿಯಾದ ಮಳೆಯಿಂದ ಹಾಳಾಗಿದ್ದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ  ಈ ರಸ್ತೆಯನ್ನು ಒಳಗೊಂಡಂತೆ ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿ ಕಾರ್ಯ ಮಾಡಿಕೊಡಬೇಕೆಂದು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು  ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಸದ ಶ್ರೇಯಸ್‌ಪಟೇಲ್, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಶಾಸಕರಾದ ಸಿಮೆಂಟ್ ಮಂಜು, ಎಚ್.ಕೆ.ಸುರೇಶ್ ಇದ್ದರು. ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮೊಹಮದ್, ಸುಜೀತಾ, ಎಸಿ ಡಾ.ಶೃತಿ,  ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು,  ಸಕಲೇಶಪುರ ದಂಡಾಧಿಕಾರಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Share with

Tags:

Leave a Reply

Your email address will not be published. Required fields are marked *