ಉಪ್ಪಳ: ಮಂಜೇಶ್ವರ ವಿಧಾನ ಸಭಾ ಮಂಡಲದ ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ಎಸ್.ಸಿ ಕಾಲನಿ ಅಭಿವೃದ್ದಿಗೆ ಅಂಬೇಡ್ಕರ್ ಗ್ರಾಮ ಅಭಿವೃದ್ದಿ ಯೋಜನೆಯಲ್ಲಿ ಸೇರಿಸಿ ಒಂದು ಕೋಟಿ ರೂ ಮಂಜೂರುಗೊoಡು ಕಾಲನಿ ಅಭಿವೃದ್ದಿಗೆ ಶಾಸಕ ಎ.ಕೆ.ಎಂ ಅಶ್ರಫ್ ರವರ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಅದರ ಜವಾಬ್ದಾರಿಯನ್ನು ಉದ್ಯೋಗಸ್ಥರಿಗೆ ವಹಿಸಿಕೊಡಲಾಗಿದೆ. ಆದರೆ ಒಂದು ವರ್ಷ ಕಳೆದರೂ ಕೆಲಸಗಳು ಪೂರ್ತಿಗೊಳ್ಳದೆ ಅಮೆನಡಿಗೆಯಲ್ಲಿ ಸಾಗುತ್ತಿರುವುದರಿಂದ ಕಾಲನಿ ನಿವಾಸಿಗಳು ಶಾಸಕರಿಗೆ ದೂರು ನೀಡಿದ್ದಾರೆ. ಇದರಂತೆ ಶನಿವಾರ ಇಂಜಿನಿಯರ್ ಸಹಿತ ಉದ್ಯೋಗಸ್ಥರ ತಂಡ ಕಾಲನಿಗೆ ತಲುಪಿ ಪರಿಶೀಲನೆ ನಡೆಸಿ, ಶೀಘ್ರ ಪೂರ್ತಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಭಿವೃದ್ದಿಯಲ್ಲಿ ೩೨ ಮನೆಗಳ ನವೀಕರಣ, ದಾರಿದೀಪ, ರಸ್ತೆ ಕಾಂಕ್ರೀಟ್, ನೀರಿನ ವ್ಯವಸ್ಥೆ ಸಹಿತ ಇತರ ಹಲವು ಯೋಜನೆಯನ್ನು ಕೈಗೊಳ್ಳಲಾಗಿದೆ. ಕಾಲನಿಗೆ ಕಾಸರಗೋಡು ಜಿಲ್ಲಾ ಡೆವಲಪ್‌ಮೆಂಟ್ ಆಫೀಸರ್ ರವಿರಾಜ್.ಕೆವಿ, ಮಂಜೇಶ್ವರ ಎಸ್.ಸಿ.ಡಿ.ಒ ತಿರುಮಲೇಶ್.ಪಿ.ಕೆ, ಪ್ರೊಜಕ್ಟ್ ಇಂಜಿನಿಯರ್ ಪಿ.ಆರ್ ಸುಂದರೇಶ್, ಇಂಜಿನಿಯರ್‌ಗಳಾದ ಸುಜಿತ್.ಸಿ.ಕೆ, ಸುಜಿತ್ ಕುಮಾರ್, ಮಂಗಲ್ಪಾಡಿ ಪ್ರೊಮೋಟರ್ ಸುಮಲತ, ಪುಳಿಕುತ್ತಿ ಎಸ್.ಸಿ ಕಾಲನಿ ಪ್ರತಿನಿಧಿಗಳಾದ ದಿನೇಶ್, ಪ್ರಮೋದ್ ಟೀಚರ್, ಹಿರಿಯ ಕಾಂಗ್ರೇಸ್ ನೇತಾರ ಮೊಹಮ್ಮದ್ ಸೀಗಂದಡಿ ಭೇಟಿ ನೀಡಿದರು.