ಬಿಡುಗಡೆಗೆ ಮುನ್ನವೇ ಸಾವಿರ ಕೋಟಿ ದಾಟಿದ ‘ಪುಷ್ಪ 2’ ಕಲೆಕ್ಷನ್

Share with

ಪ್ಯಾನ್ ಇಂಡಿಯಾ ಸಿನಿಮಾಗಳಿಗೆ 1000 ಕೋಟಿ ಕಲೆಕ್ಷನ್ ಎಂಬುದು ಅನಾಯಾಸ ಆಗಿಬಿಟ್ಟಿದೆ. ಸ್ಟಾರ್ ನಟರ ಕೆಟ್ಟ ಸಿನಿಮಾಗಳು ಸಹ ಈಗ 500 ಕೋಟಿಯಿಂದ 1000 ಕೋಟಿ ಗಳಿಸುತ್ತಿವೆ. ಇತ್ತೀಚೆಗೆ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಒಂದು ತಿಂಗಳ ಒಳಗಾಗಿಯೇ ಸುಮಾರು 600 ಕೋಟಿ ಗಳಿಸಿತ್ತು. ಆದರೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಈ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ 1000 ಕೋಟಿ ಗಳಿಕೆ ದಾಟಿಬಿಟ್ಟಿದೆ.

ಸಿನಿಮಾದ ಡಿಜಿಟಲ್, ಸ್ಯಾಟಲೈಟ್, ಮ್ಯೂಸಿಕ್ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಅಲ್ಲದೆ ಸಿನಿಮಾದ ಬಿಡುಗಡೆ ಹಕ್ಕುಗಳನ್ನು ಸಹ ಈಗಾಗಲೇ ಮಾರಾಟ ಮಾಡಲಾಗಿದ್ದು, ಸಿನಿಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇರುವಾಗಲೇ ಸಿನಿಮಾ ಭಾರಿ ಮೊತ್ತ ಗಳಿಕೆ ಮಾಡಿದೆ. ಆ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಭಾರತದ ಇನ್ಯಾವುದೇ ಸಿನಿಮಾ ಬಿಡುಗಡೆ ಮುಂಚೆಯೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿಲ್ಲ.

‘ಪುಷ್ಪ 2’ ಸಿನಿಮಾದ ಡಿಜಿಟಲ್ ಅಥವಾ ಒಟಿಟಿ ಹಕ್ಕು ನೆಟ್ಫ್ಲಿಕ್ಸ್ಗೆ ಮಾರಾಟವಾಗಿದ್ದು, 270 ಕೋಟಿ ರೂಪಾಯಿಗಳನ್ನು ನೀಡಿ ನೆಟ್ಫ್ಲಿಕ್ಸ್, ‘ಪುಷ್ಪ 2’ ಸಿನಿಮಾ ಖರೀದಿ ಮಾಡಿದೆ. ಇದರ ಜೊತೆಗೆ ಸಿನಿಮಾದ ಆಡಿಯೋ ಹಕ್ಕು 60 ಕೋಟಿ ರೂಪಾಯಿಗಳಿಗಾಗಿ ಮಾರಾಟವಾಗಿದೆ. ಸಿನಿಮಾದ ಸ್ಯಾಟಲೈಟ್ ಹಕ್ಕು ಸುಮಾರು 100 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂರರಿಂದಲೇ ಸುಮಾರು 450 ಕೋಟಿ ರೂಪಾಯಿ ಹಣ ಗಳಿಕೆ ಆಗಿದೆ.


Share with

Leave a Reply

Your email address will not be published. Required fields are marked *