ಉಡುಪಿ: ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀಕೃಷ್ಣನ ಪರ್ಯಾಯ ಕಾರ್ಯಕ್ರಮ ಆರಂಭವಾಗಿದೆ. ಪುತ್ತಿಗೆ ಮಠದ ಶ್ರೀಗಳ ಪರ್ಯಾಯ ಮೆರವಣಿಗೆಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹಾಗೂ ಶಿಷ್ಯರಾದ ಸುಶೀಂದ್ರ ತೀರ್ಥರು ಭಾಗಿಯಾಗಿದ್ದಾರೆ. ಉಡುಪಿಯ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭವಾಗಿ ರಥ ಬೀದಿಯವರೆಗೂ ನಡೆಯಿತು.
ಮೆರವಣಿಗೆಯಲ್ಲಿ ಸ್ಥಳೀಯ ಕಲಾತಂಡಗಳೂ ಸೇರಿ ನಾಸಿಕ್ ಡೋಲು, ತಾಸೆ, ಕೃಷ್ಣನ ಅವತಾರಕ್ಕೆ ಸಂಬಂಧಿಸಿದ ಸ್ತಬ್ಧ ಚಿತ್ರಗಳು, ಗೀತೆಯ ನಾಣ್ಣುಡಿ ಇರುವ ಟ್ಯಾಬ್ಲೋಗಳು, ಸರಕಾರಿ ಇಲಾಖೆಯ ಟ್ಯಾಬ್ಲೋಗಳು, ಕೇರಳ-ಭಾರತೀಯ ಶೈಲಿಯ ವಿವಿಧ ಮಾದರಿಯ ಚೆಂಡೆಗಳು, ಕುಣಿತ ಭಜನೆ, ಜನಪದ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಕ್ಕಳಿಂದ ಪಾರಾಯಣ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಪರಶುರಾಮನ ಬೃಹತ್ ವಿಗ್ರಹ, ಹುಲಿಯ ಸ್ತಬ್ಧಚಿತ್ರ, ಚಿಲಿಪಿಲಿ ಗೊಂಬೆಗಳು, ಚೆಂಡೆ, ವಯೋಲಿನ್, ಮಧ್ವಗಾನ ಯಾನ, ವಿಷ್ಣು ಸಹಸ್ರನಾಮ ಶ್ಲೋಕಗಳು, ಪೌರಾಣಿಕ ಸನ್ನಿವೇಶದ ಸ್ತಬ್ಧಚಿತ್ರಗಳು ಮೆರವಣಿಯ ಮೆರುಗನ್ನು ಹೆಚ್ಚಿಸಿತು.