ಪುತ್ತೂರು: ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಅಪಘಾತ; ಶಿಕ್ಷಕಿ ಮೃತ್ಯು..!

Share with

ಪುತ್ತೂರು: ಮುರ ಸಮೀಪದ ಪೋಳ್ಯದಲ್ಲಿ ದ್ವಿಚಕ್ರ ವಾಹನ ಮತ್ತು ಟಿಪ್ಪರ್‍ ನಡುವೆ ಅಪಘಾತ ನಡೆದು ಶಾಲಾ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಶಾಲಾ ಶಿಕ್ಷಕಿ ಅನಿತಾ

ಮೃತಪಟ್ಟವರನ್ನು ಅನಿತಾ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ತನ್ನ ಮಗುವಿನೊಂದಿಗೆ ಸಂಚರಿಸುತ್ತಿದ್ದ ಅನಿತಾ ಅವರು, ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಇನ್ನು ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಪುತ್ತೂರು ನಗರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


Share with

Leave a Reply

Your email address will not be published. Required fields are marked *