ಪುತ್ತೂರು: ಕೆರೆಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಪುತ್ತೂರಿನ ರಾಗಿದಕುಮೇರು ಸಮೀಪದ ಆಂದ್ರಟ್ಟದ ಮರಕ್ಕೂರು ಎಂಬಲ್ಲಿ ನಡೆದಿದೆ.
ಮೃತರನ್ನು ಮರಕ್ಕೂರು ನಿವಾಸಿ ಕಿರಣ್ ನಾಯ್ಕ್ (29) ಎಂದು ತಿಳಿದು ಬಂದಿದೆ
ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೃತರು ತಂದೆ ,ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.