ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೊ ಪೆರ್ಮಂಡ ಗರೋಡಿಯಲ್ಲಿ ಶ್ರೀ ಬೈದೇರುಗಳ ನೇಮ ಡಿ.21ರಿಂದ 25ರವರೆಗೆ ನಡೆಯಿತು.
ಡಿ.21ರಂದು ಪೆರ್ಮಂಡ ಗರೋಡಿಯಲ್ಲಿ ಹೋಮ, ಸ್ಥಳ ಶುದ್ದೀಕರಣ, ಡಿ.23ರಂದು ಶ್ರೀಮಹಾವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರು ಗುತ್ತಿನಿಂದ ದೈವದ ಭಂಡಾರ ತೆಗೆದು ಬಳಿಕ ಬೈದೇರುಗಳ ತಂಬಿಲ ಸೇವೆ ನಡೆಯಿತು.
ಡಿ.24ರಂದು ಇಷ್ಟ ದೇವತೆ ಮತ್ತು ಎಲ್ನಾಡು ದೈವಗಳ ನೇಮ, ಡಿ.25ರಂದು ಶ್ರೀಬೈದೇರುಗಳ ನೇಮ, ಗರಡಿ ಇಳಿದ ಬಳಿಕ ಮಾಣಿಬಾಲೆ ನೇಮ, ಕಡ್ನಲೆ ಬಲಿ ಹಾಗೂ ಇತರ ಕಾರ್ಯಕ್ರಮಗಳು ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಗಾನಸಿರಿ ಪುತ್ತೂರುರವರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಮೂಡಾಯೂರು ಗುತ್ತು ಬಿ.ಧನ್ಯ ಕುಮಾರ್ ರೈ ಬಿಳಿಯೂರುಗುತ್ತು ಹಾಗೂ ಡಾ. ಎಂ. ಅಶೋಕ್ ಪಡಿವಾಳ್ ಮೂಡಾಯೂರು ಗುತ್ತು, ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು ಸೇರಿದಂತೆ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಪ್ರಾಯೋಜಕತ್ವದಲ್ಲಿ ಗರಡಿಯವರೆಗೆ ರಸ್ತೆಯುದ್ದಕ್ಕೂ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿತ್ತು. ಬೀರ್ನಹಿತ್ಲು ಅಶ್ವ ಫ್ರೆಂಡ್ಸ್ ಹಾಗೂ ಸ್ಥಳೀಯರು ಮಹಾದ್ವಾರದ ನಿರ್ಮಾಣದಲ್ಲಿ ಸಹಕರಿಸಿದರು.