

ಪುತ್ತೂರು : ಹತ್ತೂರ ಒಡೆಯ ಮಹಾಲಿಂಗೇಶ್ವರನ `ಪುತ್ತೂರ ಜಾತ್ರೆ’ ಜಾತ್ರಾಮಹೋತ್ಸವ ಎ.10ರಿಂದ 20 ತನಕ ನಡೆಯಲಿದ್ದು, ಜಾತ್ರೋತ್ಸವಕ್ಕೆ ಗೊನೆಮುಹೂರ್ತ ಇಂದು ಬೆಳಗ್ಗೆ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯರು ಗರ್ಭಗುಡಿಯಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ವೆ.ಮೂರ್ತಿ ವಿ.ಎಸ್.ಭಟ್ ಗೊನೆ ಕಡಿಯುವ ಮೂಲಕ ಗೊನೆಮುಹೂರ್ತಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಶಾಸಕ ಅಶೋಕ್ ಕುಮಾರ್ ರೈ, ಸಮಿತಿ ಸದಸ್ಯರು, ಭಕ್ತರು, ಕರಸೇವಕರು ಈ ವೇಳೆ ಉಪಸ್ಥಿತರಿದ್ದರು.




