ಪುತ್ತೂರು: ಕೆಎಸ್ಆರ್ಟಿಸಿ ಯ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡರಾದ ಶಾಂತರಾಮ ವಿಟ್ಲ ಇವರು ಪತ್ತೂರಿನ ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಪತ್ನಿ ಪ್ರಮೀಶಾ ಎಸ್ ಶೆಟ್ಟಿ, ಮಕ್ಕಳಾದ ಶ್ರೇಯಾ ಹಾಗೂ ಸ್ನೇಹಾ ಶೆಟ್ಟಿ, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಡಿ.16ರಂದು ಬೆಳಗ್ಗೆ ಮಾಡುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶಾಂತರಾಮ ವಿಟ್ಲ ಅವರು ಜನಪರ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಅಶಕ್ತರ ಬಾಳಿಗೆ ಬೆಳಕಾಗಿದ್ದರು.