ಪುತ್ತೂರು: ತಲವಾರು ತೋರಿಸಿ ಶೋಕಿ, ಇಬ್ಬರು ಯುವಕರು ಅರೆಸ್ಟ್!

Share with

ಪುತ್ತೂರು: ಮಾರಕಾಯುಧವಾದ ತಲವಾರು ಪ್ರದರ್ಶನ ಯುವಕರಿಬ್ಬರು ಪೋಸ್ ಕೊಟ್ಟಿರುವ ಚಿತ್ರಗಳು ವೈರಲ್ ಆಗಿರುವ ಹಿನ್ನಲೆಯಲ್ಲಿ ಗುರುವಾರ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದೆ.

ಆರೋಪಿಗಳು ತಲ್ವಾರ್ ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ಭಾವಚಿತ್ರ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಸಂಜೆ ಹಂಚಿಕೊಂಡಿದ್ದರು. ಇವರು ನಿಷೇಧಿತ ಮಾರಕಾಯುಧವಾದ ತಲವಾರನ್ನು ಹಿಡಿದು ಪ್ರದರ್ಶಿಸಿ ಕಾನೂನಿಗೆ ಧಕ್ಕೆ ತರುವಂತೆ ಭಾವಚಿತ್ರವನ್ನು ತೆಗೆದು ಸಾಮಾಜಿನ ಜಾಲತಾಣದಲ್ಲಿ ಹರಿಯಬಿಟ್ಟಿರುವ ಆರೋಪದ ಬಗ್ಗೆ ಆರ್ಯಾಪು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಡರಾತ್ರಿ ಅವರಿಬ್ಬರನ್ನೂ ಪೊಲೀಸರು ಬಂಧಿಸಿ, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತ ಕೃತ್ಯ ಮಾಡಿರುವ ಪ್ರಕರಣ ದಾಖಲಿದ್ದಾರೆ


Share with

Leave a Reply

Your email address will not be published. Required fields are marked *