ಪುತ್ತೂರು: ದಿಢೀರ್ ಅಸ್ವಸ್ಥಗೊಂಡ ನವವಿವಾಹಿತೆಯೊಬ್ಬರು ಮೃತಪಟ್ಟ ಘಟನೆ ಪುತ್ತೂರಿನ ಪಡುವನ್ನೂರು ಗ್ರಾಮ ಪದಡ್ಕದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಪದಡ್ಕ ನಿವಾಸಿ ಪುಷ್ಪ(22) ಎಂದು ಗುರುತಿಸಲಾಗಿದ್ದು, ಇವರಿಗೆ ನವೆಂಬರ್ 7ರಂದು ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು, ಬಳಿಕ ಚಿಕಿತ್ಸೆಗೆಂದು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಸಾವನಪ್ಪಿದ್ದಾರೆ ಎನ್ನಲಾಗಿದೆ. ಪುಷ್ಪ ಅವರಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.
ಪುಷ್ಪ ಅವರು ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಮೃತರು ತಂದೆ, ತಾಯಿ, ಪತಿ ಸಂತೋಷ್ ಕುಲಾಲ್, ಅತ್ತೆ ಹಾಗೂ ಮಾವನನ್ನು ಅಗಲಿದ್ದಾರೆ.