ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಅತ್ಯಾಧುನಿಕ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ತಿರುಪತಿಗಿಂತಲೂ ಹೆಚ್ಚು ಸೌಕರ್ಯವಿರುವ ಸಂಕೀರ್ಣ ಈಗಾಗಲೇ ಉದ್ಘಾಟನೆಯಾಗಿದೆ.
ಈ ವ್ಯವಸ್ಥೆಯಿಂದಾಗಿ ತಮ್ಮ ಸರದಿಗಾಗಿ ಭಕ್ತರು ಕಾಯುತ್ತಾ ಕೂರಬಹುದು. ಇದಕ್ಕೆಂದೇ 16 ಸಭಾಂಗಣ. ಪ್ರತಿ ಸಭಾಂಗಣದಲ್ಲೂ 600-800 ಭಕ್ತರು ಕೂರಬಹುದು.
ಕುಡಿಯುವ ನೀರು, ಶೌಚಾಲಯ, TV, ಕೆಫೆಟೀರಿಯಾ ಸೌಲಭ್ಯ.. 160 AI ಕೆಮರಾ ಅಳವಡಿಕೆ.. ಇದರಿಂದ ಭಕ್ತರ ಎಣಿಕೆ, ಕಣ್ಣಾವಲು ಸಾಧ್ಯ.