
ಸಕಲೇಶಪುರ: ವಿಪಕ್ಷ ನಾಯಕರಾದ ಆರ್ ಅಶೋಕ್ ಸಕಲೇಶಪುರಕ್ಕೆ ಭೇಟಿ ನೀಡಿ ಮಳೆ ಹಾನಿ ಬಗ್ಗೆ ಮಾತನಾಡಿದ ಅವರು
ಸುಮಾರು 50 ವರ್ಷದಲ್ಲೇ ಮುಂಗಾರು ಈ ಬಾರಿ 15 ದಿನ ಮುಂಚಿತವಾಗಿ ಬಂದಿದೆ ಮುಂಗಾರು ಪ್ರಾರಂಭಕ್ಕು ಮುನ್ನ ಮುಖ್ಯಮಂತ್ರಿ ಒಂದು ಸಭೆ ಮಾಡಬೇಕಿತ್ತು,ಪ್ರತಿ ಬಾರಿ ಹಾನಿಯಾದಾಗ ಒಂದು ತಿಂಗಳು ಎರಡು ತಿಂಗಳು ಪರಿಹಾರ ನೀಡುವ ತಡ ಆಗುತ್ತೆ ಸಕಲೇಶಪುರ, ಚಿಕ್ಕಮಗಳೂರು , ಕೊಡಗಿನಲ್ಲಿ ಭೂಕುಸಿತ ಆಗುತ್ತಿದೆ,ಮುಂಜಾಗ್ರತಾ ಕ್ರಮವಹಿಸಿ ಸರ್ಕಾರ ಪರಿಹಾರ ಸೂಚಿಸಬೇಕು.

ಆದರೆ ಸರ್ಕಾರ ಇಲ್ಲಿವರೆಗೆ ಏನು ಮಾಡಿಲ್ಲ. ಕೇವಲ ಜನರಿಗೆ ಮಾತ್ರ ಮಳೆ ಬಂದಿದೆ ಅಷ್ಟೇ.. ಮಳೆ ಬಂದಿದೆ ಅಂತ ಸರ್ಕಾರಕ್ಕೆ ಇನ್ನೂ ಗೊತ್ತೇ. ಒಬ್ಬ ಮಂತ್ರಿ ಕೂಡ ಸ್ಥಳ ಪರಿಶೀಲನೆ ಮಾಡಿಲ್ಲ.
ಈಗ ಈ ತರಹದ್ ಯಾವುದೇ ಪರಿಹಾರ ನೀಡುತ್ತಿಲ್ಲ ಕೇವಲ ಸಾಧನ ಸಮಾವೇಶ ರಾಷ್ಟ್ರೀಯ ಸಮಾವೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರು ನೀತಿ ಆಯೋಗದ ಸಭೆಗೆ ಹೋಗಿಲ್ಲ.
ಅದನ್ನು ಬಿಟ್ಟು ದುಡ್ಡು ಕೊಟ್ಟಿಲ್ಲ ದುಡ್ಡು ಕೊಟ್ಟಿಲ್ಲ ಅಂತ ಹೇಳುತ್ತಾರೆ. ಅಷ್ಟೇ ಪಕ್ಕದ ತಮಿಳುನಾಡಿನವರು ಒಂದು ದಿನ ಅಲ್ಲೇ ಹೋಗಿ ಕೂತು ಅವರಿಗೆ ಏನು ಬೇಕು ಅದನ್ನು ಕೇಳುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಆರಾಮಾಗಿ ನಿದ್ದೆ ಹೊಡೆದುಕೊಂಡು ಗೊರಕೆ ಹೊಡೆಯುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯನಿಗೆ ಏನು ಲಾಸ್ ಆಗೋದಿಲ್ಲ ನಷ್ಟ ಆಗೋದು ರಾಜ್ಯದ ಜನರಿಗೆ ಮಾತ್ರ. ಅದರ ಬಗ್ಗೆ ಜ್ಞಾನಯಿದ್ದಿದ್ದರೆ ಸರ್ಕಾರ ಹೋಗಬೇಕಿತ್ತು. ಅಲ್ಲಿ ಹೋಗಿ ಬೇಡಿಕೆ ಆಗ್ರಹ ಮಾಡಬೇಕಿತ್ತು.
ಇಲ್ಲಿ ಇವರು ಕ್ರಿಕೆಟ್ ಮ್ಯಾಚ್ ನೋಡಿಕೊಂಡು ಕಡ್ಲೆಪುರಿ ತಿನ್ನೊಂಡು ಮಸಾಲಾಪುರಿ ತಿನ್ನೊಂಡು ಆರಾಮಾಗಿದ್ದಾರೆ. ಇವರಿಗೆ ರಾಜಸ್ಥಾನಕ್ಕೆ ಕಾಂಗ್ರೆಸ್ ಸಮಾವೇಶಕ್ಕೆ ಹೋಗೋದಕ್ಕೆ ಆಗುತ್ತೆ.. ದೆಹಲಿಗೆ ಮಾತ್ರ ಹೋಗೋದಕ್ಕೆ ಆಗೋದಿಲ್ಲ ಅವರಿಗೆ ಎಂದರು.




