ನಟ ಧ್ರುವ ಸರ್ಜಾ ಅವರ 7ನೇ ಸಿನಿಮಾದ ಟೈಟಲ್ ಅನಾವರಣವಾಗಿದೆ. ‘ಮಾರ್ಟಿನ್’ ನಂತರ ಇದೀಗ ‘ಕ್ರಿಮಿನಲ್’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಈ ಬಾರಿಯೂ ಮೂರು ಅಕ್ಷರದ ಟೈಟಲ್ ಇಡಲಾಗಿದೆ ಎಂಬುದು ವಿಶೇಷ.

‘ಕೆರೆಬೇಟೆ’ ಸಿನಿಮಾ ಖ್ಯಾತಿಯ ರಾಜ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಭರ್ಜರಿ’ ಸಿನಿಮಾ ನಂತರ ಅಂದರೆ 8 ವರ್ಷಗಳ ಬಳಿಕ ರಚಿತಾ ರಾಮ್, ಧ್ರುವ ಸರ್ಜಾ ಜೊತೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಹೋರಿ ಶಿವ ಹೆಸರಿನ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.




