ಗಿಲ್ಲಿ ಮೇಲೆ ಗರಂ ಆದ ರಘು..! ಜಗಳ ನಿಲ್ಲಿಸೋಕೆ ರಜತ್ ಯತ್ನ

Share with

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ಪೈಪೋಟಿ ನಡೆದಿದೆ. ಇಂದು ಯಾರು ಕ್ಯಾಪ್ಟನ್ ಆಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.

ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ – ಧ್ರುವಂತ್ ಅವರು ಮಧ್ಯರಾತ್ರಿ ಮನೆಗೆ ಬಂದು ಮನೆಯನ್ನು ಕಸ – ಕಡ್ಡಿಯನ್ನು ಗಲೀಜು ಮಾಡಲಿದ್ದಾರೆ. ಮನೆಯನ್ನು ಪೂರ್ತಿಯಾಗಿ ಸ್ವಚ್ಛತೆ ಮಾಡುವ ಟಾಸ್ಕ್ ಮನೆ ಮಂದಿಗೆ ನೀಡಲಾಗಿದೆ.

ರಕ್ಷಿತಾ ಹಾಗೂ ಧ್ರುವಂತ್ ಅವರು ಬೇಕಾಬಿಟ್ಟಿಯಾಗಿ ಮನೆಯನ್ನು ಗಲೀಜು ಮಾಡಿದ್ದಾರೆ. ಈ ಮನೆಯನ್ನು ಮನೆಮಂದಿ ವ್ಯವಸ್ಥಿತವಾಗಿ ಸ್ವಚ್ಛ ಮಾಡಿದರೆ ಈ ವಾರ ಲಕ್ಷುರಿ ಬಜೆಟ್ ಗಳಿಸುವ ಅವಕಾಶವನ್ನು ಗಳಿಸಲಿದೆ. ಮನೆ ಕ್ಲೀನ್ ಮಾಡುತ್ತಾ ಮನೆಯವರು ಸುಸ್ತಾಗಿ ಹೋಗಿದ್ದಾರೆ.

ಇನ್ನೊಂದು ಕಡೆ ಗಿಲ್ಲಿ ಅವರ ತಮಾಷೆಗೆ ರಘು ಗರಂ ಆಗಿದ್ದಾರೆ. ಅಡುಗೆ ಮಾಡುತ್ತಿರುವ ರಘು ಅವರ ಬಳಿ ಗಿಲ್ಲಿ ಅವರು ಪದೇ ಪದೇ ಅಡುಗೆ ಆಯ್ತಾ ಎಂದು ಕೇಳಿದ್ದಾರೆ. ಇದಕ್ಕೆ ರಘು ಟೈಮ್ ಬೇಕು ಅಂತ ಹೇಳಿದ್ದಾರೆ. ಆದರೆ ಗಿಲ್ಲಿ ಮತ್ತೆ ಆಯ್ತಾ ಅಣ್ಣ ಎಂದಿದ್ದಾರೆ.


Share with

Leave a Reply

Your email address will not be published. Required fields are marked *