ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಹಳೆಯ ಬಂಗಲೆಯನ್ನು ಮರಳಿ ಪಡೆದಿದ್ದಾರೆ. ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾದ ಒಂದು ದಿನದಲ್ಲೇ ಅವರಿಗೆ ಹಳೆಯ ಸರ್ಕಾರಿ ಬಂಗಲೆ ಮಂಜೂರು ಮಾಡಲಾಗಿದೆ.
ದೆಹಲಿಯ 12 ತುಘಲಕ್ ಲೇನ್‌ನಲ್ಲಿರುವ ಬಂಗಲೆಯನ್ನು ವಶಕ್ಕೆ ತೆಗೆದುಕೊಂಡಿದ್ದ ವಸತಿ ಸಮಿತಿ ಅದನ್ನು ಅವರಿಗೆ ವಾಪಸ್ ನೀಡಿದ್ದು, ರಾಹುಲ್ ಹಳೆಯ ನಿವಾಸಕ್ಕೆ ವಾಪಸ್ ಆಗಲಿದ್ದಾರೆ. ‘ಇಡೀ ಭಾರತವೇ ನನ್ನ ಮನೆ’ ಎಂದು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.