ಡಿ. 26 ರಿಂದ ರೈಲ್ವೆ ಟಿಕೆಟ್ ದರ ಏರಿಕೆ ಆಗಲಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 1 KMಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ. ಈ ಹಿಂದೆ ನಾನು ವಿರೋಧ ಪಕ್ಷದಲ್ಲಿದ್ದಾಗ ರೈಲ್ವೆ ಟಿಕೆಟ್ ದರ ಹೆಚ್ಚಳ ಆಗಿದ್ದಕ್ಕೆ ಲೋಕಸಭೆಯಲ್ಲಿ ಮಾತಾಡಿದ್ದೆ. ರೈಲ್ವೆ ಟಿಕೆಟ್ ದರ ಹೆಚ್ಚು ಏರಿಕೆ ಆಗಿಲ್ಲ.

ಇದನ್ನ ಪೊಲಿಟಿಕಲ್ ಟೂಲ್ ಮಾಡಿಕೊಂಡು ಜನರ ಅಪೇಕ್ಷೆ ಮೇರೆಗೆ 1 ಪೈಸೆ ಹೆಚ್ಚು ಮಾಡಿದ್ದೇವೆ. ಪ್ರಯಾಣಿಕರಿಗೆ ಸಬ್ಸಿಡಿ ಕೊಡಲಾಗುತ್ತಿದೆ ಎಂದಿದ್ದಾರೆ.




