ಕೊಡಗಿನಲ್ಲಿ ಮಳೆ: 60ಕ್ಕೂ ಹೆಚ್ಚು ಕುಟುಂಬಗಳು ಕಂಗಾಲು!

Share with

ಕೊಡಗಿನಲ್ಲಿ ಮಳೆ ಆರ್ಭಟ ಮುಂದುವರಿದ ಹಿನ್ನಲೆ ಅಪಾಯದ ಮಟ್ಟ ಮೀರಿ ನದಿ, ಹಳ್ಳಗಳು ಹರಿಯುತ್ತಿವೆ. ಭಾರೀ ಮಳೆಯಿಂದ ಅಲ್ಲಲ್ಲಿ ಭೂಮಿ ಕುಸಿಯುತ್ತಿದೆ.

ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಶಕ್ತಿನಗರದಲ್ಲಿ ಭೂ ಕುಸಿತದ ಭೀತಿ ಹಿನ್ನಲೆ ಕಡಿದಾದ ಬೆಟ್ಟದ ಮೇಲಿರುವ 60ಕ್ಕೂ ಹೆಚ್ಚು ಕುಟುಂಬಗಳು ಮನೆ ತೊರೆದಿವೆ. ಸದ್ಯ ಕೊಡಗು ಜಿಲ್ಲಾಡಳಿತ ಈ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ. ಅಪಾಯದ ಮಟ್ಟ ಮೀರಿ ನದಿ ತೊರೆಗಳು ಹರಯುತ್ತಿದ್ದು, 2018ರ ಘಟನೆ ಮರುಕಳಿಸುವ ಆತಂಕ ಎದುರಾಗಿದೆ.


Share with

Leave a Reply

Your email address will not be published. Required fields are marked *