ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಹೊಂದಿಕೊAಡಿರುವ ರಸ್ತೆಯನ್ನು ನವೀಕರಣಗೊಳಿಸಿ ಅಭಿವೃದ್ದಿಪಡಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ಮಳೆ ನೀರು ಕಟ್ಟು ನಿಲ್ಲುವುದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದಾಗಿ ದೂರಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಇಂಟರ್‌ಲಾಕ್ ಅಳವಡಿಸಿ ರಸ್ತೆಯನ್ನು ದುರಸ್ಥಿಗೊಳಿಸಲಾಗಿದೆ. ಆದರೆ ಸಮತಟ್ಟುಗೊಳ್ಳದ ಕಾರಣ ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊAಡು ವಾಹನ ಸಂಚಾರದ ವೇಳೆ ನಡೆದು ಹೋಗುವರ ಮೇಲೆ ಕೆಸರು ನೀರು ಎರಚುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಗೇಟ್ ಹಾಕಿದ ವೇಳೆ ವಾಹನಗಳು ನೀರಿನಲ್ಲಿ ನಿಲ್ಲಬೇಕಾಗಿದೆ. ಕಳಪೆ ಕಾಮಗಾರಿ ಕಾರಣವೆಂದು ನಾಗರಿಕರು ದೂರಿದ್ದಾರೆ.