
ಸುಧಾಕರ ಬನ್ನಂಜೆ ಇವರು ಕಥೆ ಚಿತ್ರಕಥೆ ಸಂಭಾಷಣೆ ಹಾಡು ಬರೆದು, ಗೆಳೆಯರ ಜತೆಗೂಡಿ ನಿರ್ಮಿಸಿ ನಿರ್ದೇಶಿಸಿದ ತುಳು ಹಾಸ್ಯ ಪ್ರಧಾನ ಸಾಂಸಾರಿಕ ಕಥಾ ವಸ್ತುವಿನ ತುಳುನಾಡ ಮಣ್ಣಿನ ಸೊಗಡಿನ ಇನ್ನೂರಕ್ಕೂ ಮಿಕ್ಕಿದ ಕಲಾವಿದರು ನಟಿಸಿರುವ “ಗಂಟ್ ಕಲ್ವೆರ್” ಚಿತ್ರ ಬರುವ ಮೇ 23 ರಂದು ರಾಜ್ಯಾದ್ಯಾಂತ ಬಿಡುಗಡೆ ಆಗಲಿದೆ.
ಪ್ರಶಸ್ತಿ ವಿಜೇತ ವಿ. ಮನೋಹರ್ ಸಂಗೀತ ನೀಡಿದ್ದು ಹಾಡುಗಳು ಈಗಾಗಲೇ ಜನರ ಬಾಯಲ್ಲಿ ನಲಿದಾಡುತ್ತಿದೆ
‘ನಿನ್ನ ಕಡೆ ನೋಟೋಗು ಮತ್ತು ಈ ಪೋರ್ಲುದ ಈ ಮೋನೆಡ್’ ಎಂಬ ಎರಡು ಹಾಡುಗಳು ಈಗಾಗಲೇ ವೈರಲ್ ಆಗಿವೆ. ನವೀನ್ ಪಡೀಲ್, ಅರವಿಂದ ಬೋಳಾರ, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಉಮೇಶ ಮಿಜಾರು, ಸಂದೀಪ ಶೆಟ್ಟಿ ಮಾಣಿಬೆಟ್ಟು, ರವಿ ಸುರತ್ಕಲ್, ಪ್ರಶಾಂತ ಎಳ್ಳಂಪಳ್ಳಿ, ಯಾದವ ಮಣ್ಣಗುಡ್ಡೆ, ವಸಂತ ಮುನಿಯಾಲ್, ಅರುಣ ಕುಮಾರ ಹೀಗೆ ಹಾಸ್ಯ ನಟರ ದಂಡಿದೆ.





