ಉಡುಪಿ: ಕಳೆದ ಕೆಲ ಸಮಯದಿಂದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಊರಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಉಡುಪಿ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ. ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ನೇಮೋತ್ಸವದಲ್ಲಿ ಕುಟುಂಬ ಸಮೇತರಾಗಿ ಅವರು ಭಾಗಿಯಾಗಿದ್ದಾರೆ.
ಅಲೆವೂರು ದೊಡ್ಡಮನೆ ಕುಟುಂಬದ ಕುಡಿಯಾಗಿರುವ ರಕ್ಷಿತ್ ಶೆಟ್ಟಿ ಎಲ್ಲಿದ್ದರೂ, ಇಲ್ಲಿನ ನೇಮೋತ್ಸವಕ್ಕೆ ಬರುತ್ತಾರೆ. ಅದರಂತೆ ಈ ವರ್ಷನೂ ಬಂದಿದ್ದಾರೆ.
ನೇಮೋತ್ಸವದ ವೇಳೆ ದೈವವು ‘ಚಿಂತೆ ಬೇಡ ನಾನು ನಿನ್ನ ಹಿಂದಿದ್ದೇನೆ’ ಎಂಬ ಅಭಯವನ್ನೂ ನೀಡಿದೆ ಎನ್ನಲಾಗಿದೆ.
ಕೊನೆಯ ಬಾರಿ ರಕ್ಷಿತ್ ಶೆಟ್ಟಿ’ ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಅವರು ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಸದ್ಯ ಅವರು ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ.
‘ರಿಚರ್ಡ್ ಆಂಟನಿ’ ಚಿತ್ರ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಅಪ್ಲೇಟ್ಗಾಗಿ ಅವರ ಅಭಿಮಾನಿಗಳು ಕಳೆದ ಮೂರು- ನಾಲ್ಕು ವರ್ಷಗಳಿಂದ ಕಾಯುತ್ತಿದ್ದಾರೆ.




