ಅಪಾಯದಂಚಿನಲ್ಲಿರುವ ಗುರಿಪಳ್ಳ ತಾರಗಂಡಿ ಸೇತುವೆ; ಸ್ಥಳಕ್ಕೆ ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ ರಕ್ಷಿತ್‌ ಶಿವರಾಂ

Share with

ಗುರಿಪಳ್ಳ: ಉಜಿರೆ ಗ್ರಾಮದ ಗುರಿಪಳ್ಳದ ತಾರಗಂಡಿ ಎಂಬಲ್ಲಿ ಇರುವ ತೀರಾ ಹಳೆಯದಾದ ಕಿರು ಸೇತುವೆಯೊಂದು ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿದೆ. ಈಗಾಗಲೆ ಎಚ್ಚರಿಕೆ ಬ್ಯಾನರ್ ಕೂಡ ಲೋಕೋಪಯೋಗಿ ಇಲಾಖೆಯಿಂದ ಹಾಕಲಾಗಿರುತ್ತದೆ.

ಅಪಾಯದಂಚಿನಲ್ಲಿರುವ ಗುರಿಪಳ್ಳ ತಾರಗಂಡಿ ಸೇತುವೆಗೆ ಸ್ಥಳಕ್ಕೆ ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ ರಕ್ಷಿತ್‌ ಶಿವರಾಂ.

ಡಿ.11ರಂದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ರವರು ಭೇಟಿ ನೀಡಿ ಬಿರುಕು ಬಿಟ್ಟ ಸೇತುವೆಯನ್ನು ಸ್ಥಳೀಯರೊಂದಿಗೆ ಪರಿಶೀಲಿಸಿ, ಸೇತುವೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಇನ್ನೇನು ಕೆಲವೇ ದಿವಸಗಳಲ್ಲಿ ಕುಸಿದು ಬೀಳುವ ಸಂಭವದಲ್ಲಿರುವುದನ್ನು ಗಮನಿಸಿದ ಇವರು ಆ ಕೂಡಲೇ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಸೇತುವೆಯ ಬಗ್ಗೆ ಸಮಗ್ರ ವರದಿಯನ್ನು ತಯಾರು ಮಾಡಿ ಕೂಡಲೆ ಹೊಸ ಸೇತುವೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಂತರ ಮಾತನಾಡಿ ಹೊಸ ಸೇತುವೆಯನ್ನು ಆದಷ್ಟು ಶೀಘ್ರದಲ್ಲಿ ನಿರ್ಮಿಸುವ ಬಗ್ಗೆ ಮಾನ್ಯ ಸಚಿವರ ಜೊತೆ ಮಾತನಾಡಿ ಸರಕಾರದಿಂದ ಮಂಜೂರುಗೊಳಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಅಪಾಯದಂಚಿನಲ್ಲಿರುವ ಗುರಿಪಳ್ಳ ತಾರಗಂಡಿ ಸೇತುವೆ

ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷರಾದ ಸುಂದರ ಪೂಜಾರಿ, ಮಾಜಿ ಗ್ರಾ.ಪಂ ಸದಸ್ಯರಾದ ನೀಲಯ್ಯ ಪೂಜಾರಿ, ಉಜಿರೆ ಗ್ರಾ.ಪಂ. ಸದಸ್ಯರಾದ ಅನಿಲ್, ನಾಣ್ಯಪ್ಪ ಪೂಜಾರಿ, ಪ್ರವೀಣ್ ಹಳ್ಳಿಮನೆ, ಯಶೋಧರ ಗೌಡ, ಸುದ್ದಿ ಬಿಡುಗಡೆ ವರದಿಗಾರರಾದ ಹೆರಾಲ್ಡ್ ಪಿಂಟೋ, ರಾಧಾಕೃಷ್ಣ ಶರ್ಮಾ ಗುರಿಪಳ್ಳ, ರತ್ನಾಕರ ಪೂಜಾರಿ, ಪ್ರಸಾದ್ ಕುಮಾರ್, ಸಂದೀಪ್ ಕೊಡೆಕ್ಕಲ್ ಹಾಗೂ ಊರವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *