ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ನಿವೃತ್ತ ಬ್ಯಾಂಕ್ ಮೆನೇಜರ್ ರಾಮಚಂದ್ರ ಸಿ ಚೆರುಗೋಳಿಯವರ ನಿಧನದ ಬಗ್ಗೆ ಕೊಂಡೆವೂರು ಶ್ರೀಗಳು ವಿಷಾದ ವ್ಯಕ್ತ ಪಡಿಸಿದರು. ನಮ್ಮ ಆಶ್ರಮದ ಎಲ್ಲಾ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅವಿಶ್ರಾಂತ ಸೇವೆಯನ್ನು ಸಲ್ಲಿಸಿದ್ದಾರೆ. ಅದೆಷ್ಟೊ ಬಡ, ಹಿಂದುಳಿದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದಂತಹ ಸರಳ ಸಜ್ಜನಿಕೆಯ ಉದಾತ್ತ ವ್ಯಕ್ತಿತ್ವ ಅವರದಾಗಿತ್ತು ,ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಶ್ರೀಗಳು ಸಂಪ್ರಾರ್ಥಿಸಿದ್ದಾರೆ.
ವಿದ್ಯಾಪೀಠದ ಆಡಳಿತ ಮಂಡಳಿ , ರಕ್ಷಕ ಶಿಕ್ಷಕ ಸಂಘ, ಪ್ರಾಂಶುಪಾಲರು, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಅವರ ನಿಧನಕ್ಕೆ ಖೇದ ವ್ಯಕ್ತ ಪಡಿಸಿದ್ದಾರೆ.