ಉಪ್ಪಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ವ್ಯಾಪಕಗೊಳ್ಳುತ್ತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ಆತಂಕಗೊಂಡಿದ್ದಾರೆ. ಗುರುವಾರ ಸಂಜೆ ಕೂಡಾ ಉಪ್ಪಳ ಭಗವತೀ ಗೇಟ್ ಸಮೀಪದಲ್ಲಿ ಎರಡು ಕಾರುಗಳು ಹಾಗೂ ಟಿಪ್ಪರ್ ಲಾರಿ ಮಧ್ಯೆ ಅಪಘಾತ ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಈ ತಿಂಗಳ ೭ರಂದು ಕುಂಜತ್ತೂರು ಹೆದ್ದಾರಿಯಲ್ಲಿ ಕಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ತೃಶೂರು ನಿವಾಸಿ ಶಿವಕುಮಾರ್ ಹಾಗೂ ಇವರ ಇಬ್ಬರು ಮಕ್ಕಳಾದ ಶರತ್, ಸೌರವ್ ಮೃತಪಟ್ಟ ದಾರುಣ ಘಟನೆ ನಡೆದಿದೆ. ೧೫ರಂದು ಸಂಜೆ ಹೊಸಂಗಡಿಯಲ್ಲಿ ಟೆಂಪೋ ಹಾಗೂ ಕಾರು ಮಧ್ಯೆ ಉಂಟಾದ ಅಪಘಾತದಲ್ಲಿ ಮಂಗಳೂರು ನಿವಸಿ ಬಿಪಿನ್ ಎಂಬವರು ಮೄತಪಟ್ಟಿದ್ದಾರೆ.