ಉಪ್ಪಳ: ವ್ಯಾಪಕಗೊಂಡಿರುವ ಬೀದಿ ನಾಯಿಗಳು: ಪಾದಚಾರಿಗಳಲ್ಲಿ ಭೀತಿ

Share with

ಉಪ್ಪಳ: ಬೀದಿ ನಾಯಿಗಳ ಉಪಟಳದಿಂದ ಪಾದಚಾರಿಗಳಲ್ಲಿ ಭೀತಿ ಸೃಷ್ಟಿಸಿದೆ. ಪೆರ್ಮುದೆ, ಸುಬ್ಬಯ್ಯಕಟ್ಟೆ, ಚೇವಾರು ಸಹಿತ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ಇದರಿಂದ ನಡೆದು ಹೋಗುವವರಿಗೆ ಭೀತಿ ಉಂಟಾಗಿದೆ.

ವ್ಯಾಪಕಗೊಂಡಿರುವ ಬೀದಿ ನಾಯಿಗಳು

ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ತಿನ್ನಲು ಗುಂಪು ಗುಂಪಾಗಿ ಪರಸ್ಪರ ಕಚ್ಚಾಡಿ ನಡೆದು ಹೋಗುವ ಜನರನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟುವುದು ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ನಾಯಿಯ ಕಾಟದಿಂದ ಶಾಲಾ ಮಕ್ಕಳಲ್ಲಿ ಆತಂಕ ಹೆಚ್ಚಿದೆ. ಅಲ್ಲದೆ ರಸ್ತೆಯಲ್ಲಿ ವಾಹನಗಳ ಎದುರಿನಿಂದ ಅಡ್ಡದಿಡ್ಡಿಯಾಗಿ ಅಲೆದಾಡುತ್ತಿರುವುದರಿಂದ ಅಪಘಾತಕ್ಕೂ ಕಾರಣವಾಗುತ್ತಿದೆ.

ಮೇಯಲು ಬಿಟ್ಟ ಆಡುಗಳನ್ನು ಬೆನ್ನಟ್ಟುತ್ತಿದೆ, ತಿಂಗಳುಗಳ ಹಿಂದೆ ಕೋಡಿಬೈಲ್ ಶೆಡ್ಡ್ ನಲ್ಲಿ ಹಾಕಿದ 9 ಆಡುಗಳನ್ನು ಕೊಂದು ಹಾಕಿದೆ. ಅಲ್ಲದೆ ಚಿಪ್ಪಾರ್ ನಲ್ಲಿ ಮೂರು ಮಕ್ಕಳಿಗೆ ಕಡಿದು ಗಾಯಗೊಳಿಸಿದೆ, ಪಚ್ಚಂಬಳ ಪರಿಸರದಲ್ಲಿ ಮಹಿಳೆಯೋರ್ವರ ಆಡನ್ನು ಕೊಂದು ಹಾಕಿದ ಘಟನೆ ನಡೆದಿದೆ. ಅಲೆಮಾರಿ ನಾಯಿಗಳ ಬಗ್ಗೆ ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *