ಮಗುವಿನ ಮೇಲೆ ಅತ್ಯಾಚಾರ, ಕೊಲೆ; ತನಗೆ ಗಲ್ಲು ಶಿಕ್ಷೆ ನೀಡಲು ಅಪರಾಧಿಯಿಂದ ನ್ಯಾಯಾಧೀಶರಿಗೆ ಮನವಿ

Share with

ನವದೆಹಲಿ: ಐದು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆಕೆಯ ಸೋದರ ಸಂಬಂಧಿಯೇ ಅಪರಾಧಿ ಎಂದು ವಿಚಾರಣೆ ವೇಳೆ ಸಾಬೀತಾಗಿದೆ. ಈ ಪ್ರಕರಣದ ತೀರ್ಪು ಪ್ರಕಟಿಸುವ ಮುನ್ನ ನ್ಯಾಯಾಧೀಶರು ಅಪರಾಧಿಯ ಬಳಿ ನೀವು ಏನಾದರೂ ಹೇಳಬೇಕೆ? ಎಂದು ಕೇಳಿದ್ದಾರೆ. ಆಗ ಆತ ತನ್ನನ್ನು ನೇಣಿಗೇರಿಸಬೇಕು ಎಂದು ಮನವಿ ಮಾಡಿದ್ದಾನೆ. ಇದಾದ ನಂತರ, ನ್ಯಾಯಾಧೀಶರು ಶ್ರೀರಾಮ ಚರಿತ್ ಮಾನಸದಲ್ಲಿ ಕಿಷ್ಕಿಂಧಾ ಕಾಂಡದ ಪದ್ಯವನ್ನು ಉಲ್ಲೇಖಿಸಿದ್ದಾರೆ.

ಈ ಪ್ರಕರಣವು ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದ ಸೊಹಾಗ್‌ಪುರ ಸೆಷನ್ ನ್ಯಾಯಾಲಯದಲ್ಲಿ ನಡೆದಿದೆ. ಶೋಭಾಪುರ ಪಟ್ಟಣದಲ್ಲಿ 2021ರ ಡಿಸೆಂಬರ್ 25ರಂದು ನಡೆದ ಈ ಘಟನೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‌ಕೆ ಚೌಬೆ ವಿಚಾರಣೆ ನಡೆಸುತ್ತಿದ್ದರು. ಅತ್ಯಾಚಾರ ನಡೆಸಿದ ಬಳಿಕ ಆರೋಪಿ ಸಿಕ್ಕಿಬೀಳುವ ಭಯದಿಂದ 5 ವರ್ಷದ ಅಪ್ರಾಪ್ತ ಬಾಲಕಿಯನ್ನು ಮನೆಯ ಮಾಳಿಗೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ.

ಆ ವೇಳೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಕಿಶನ್ ಅಲಿಯಾಸ್ ಚಿನ್ನು ಮಚ್ಚಿಯಾ ಮೃತ ಬಾಲಕಿಯ ಸೋದರ ಮಾವನ ಮಗ. ಅತ್ತೆಯ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆತ ಕೊಲೆ ಮಾಡಿದ್ದ.

ಇದು ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಿದೆ. ತನ್ನ ನಿರ್ಧಾರವನ್ನು ಬರೆಯುವಾಗ, ಮುಗ್ಧ, ನಿಷ್ಕಪಟ ಹುಡುಗಿಯ ಮೇಲಿನ ಅತ್ಯಾಚಾರ ಅಪರೂಪದ ಘಟನೆಗಳಲ್ಲಿ ಅಪರೂಪ ಎಂದು ನ್ಯಾಯಾಧೀಶರು ಹೇಳಿದರು. ಇದರಲ್ಲಿ ಸೋದರ ಸಂಬಂಧಿಯಿಂದಲೇ ಅತ್ಯಾಚಾರ ಇನ್ನಷ್ಟು ಘೋರವಾಗಿದೆ. ಹೀಗಾಗಿ ಮರಣದಂಡನೆ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ಈ ತೀರ್ಪಿಗೆ ಅಲ್ಲಿದ್ದ ಪ್ರತಿಯೊಬ್ಬರು ಸಂತಸ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಎಜಿಪಿ ಶಂಕರ್ ಲಾಲ್ ಮಾಳವೀಯ ಮತ್ತು ಎಡಿಪಿಒ ಬಾಬುಲಾಲ್ ಕಕೋಡಿಯಾ ಸಮರ್ಥಿಸಿಕೊಂಡರು. ಜಗತ್ತು ಏನೆಂದೇ ತಿಳಿಯದ ಮುಗ್ಧ ಬಾಲಕಿಯ ಕೊಲೆಗೆ ಇದು ತಕ್ಕ ಶಿಕ್ಷೆ ಎಂದಿದ್ದಾರೆ.


Share with

Leave a Reply

Your email address will not be published. Required fields are marked *