ಮಂಜೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಶಿಕ್ಷಕ್ ಸಹೃದಯ, ಸರಳ ವ್ಯಕ್ತಿತ್ವದ ಅಶೋಕ ಅಂಬಾರ್ ಐಲ ರವರು ಜೂ.16ರಂದು ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಇವರು ಮಂಜೇಶ್ವರ ಮಂಡಲಘೋಷ್ ಪ್ರಮುಖ್, ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಟ್ರಸ್ಟಿಯಾಗಿ, ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಚಿರುಗೋಳಿಯ ಪ್ರಧಾನ ಕಾರ್ಯದರ್ಶಿಯಾಗಿ, ವೀರ ಕೇಸರಿ ವ್ಯಾಯಾಮ ಶಾಲೆ ಐಲ ಇದರ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಮೃತರ ಅಗಲಿಕೆಗೆ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.