ಕಾನ್ಸುರ: ಕಾನ್ಸುರದಿಂದ ದೆಹಲಿಗೆ ಹೊರಟ ವಿಮಾನವನ್ನು ಇಲಿಯೊಂದು ಮೂರು ಗಂಟೆಗಳ ಕಾಲ ನಿಲ್ದಾಣದಲ್ಲೇ ನಿಲ್ಲಿಸಿಟ್ಟ ಪ್ರಕರಣವೊಂದು ಕಾಲ್ಪುರದಲ್ಲಿ ನಡೆದಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.

ಏನಿದು ಪ್ರಕರಣ:
140 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ರವಿವಾರ ಮಧ್ಯಾಹ್ನ 2:55ಕ್ಕೆ ಕಾನ್ಸುರದಿಂದ ದೆಹಲಿಗೆ ಹೊರಡಬೇಕು ಎನ್ನುವಷ್ಟರಲ್ಲಿ ವಿಮಾನದ ಕ್ಯಾಬಿನ್ ನಲ್ಲಿ ಇಲಿಯೊಂದು ಓಡಾಡುವುದು ಪ್ರಯಾಣಿಕರ ಕಣ್ಣಿಗೆ ಬಿದ್ದಿದೆ ಕೂಡಲೇ ಪ್ರಯಾಣಿಕ ವಿಮಾನದಲ್ಲಿದ್ದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ ಕೂಡಲೇ ಎಚ್ಚೆತ್ತ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಇಲಿ
ಹುಡುಕಾಟ ನಡೆಸಿದ್ದಾರೆ ಇದಾದ ಸುಮಾರು ಎರಡು ಗಂಟೆಗಳ ಬಳಿಕ ವಿಮಾನದಲ್ಲಿ ಅಡಗಿದ್ದ ಇಲಿ ಪತ್ತೆಯಾಗಿದೆ ಬಳಿಕ ಪ್ರಯಾಣಿಕರನ್ನು ಹತ್ತಿಸಿ 6:03 ಕ್ಕೆ ಕಾನ್ಸುರದಿಂದ ಹೊರಟು ಸಂಜೆ 7:16 ಕ್ಕೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದೆ.
ಘಟನೆ ಕುರಿತು ವಿಮಾನಯಾನ ಅಧಿಕಾರಿಗಳು ಕೂಡ ಮಾಹಿತಿಯನ್ನು ನೀಡಿದ್ದು ವಿಮಾನದಲ್ಲಿ ಕಾಣಿಸಿಕೊಂಡ ಇಲಿಯಿಂದಾಗಿ ಪ್ರಯಾಣಿಕರು ಮೂರು ಗಂಟೆ ವಿಳಂಬವಾಗಿ ದೆಹಲಿ ತಲುಪಬೇಕಾಯಿತು ಅದಕ್ಕಾಗಿ ಕ್ಷಮೆಯನ್ನು ಕೋರುತ್ತೇವೆ ಎಂದು ಹೇಳಿದ್ದಾರೆ.




