ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ: ಸಮರ್ಪಕವಾಗಿ ತಲುಪದ ಸರಕಾರದ ‘ಸುವಿಧಾ’

Share with

ಉಡುಪಿ: ರಾಜ್ಯದ ಹಿರಿಯ ನಾಗರಿಕರ ಅನುಕೂಲಕ್ಕಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಸುವಿಧಾ ಯೋಜನೆಯ ಮಾಹಿತಿಯನ್ನು ಸರಿಯಾಗಿ ತಲುಪಿಸಲು ಇಲಾಖೆ ಹಾಗೂ ನ್ಯಾಯಬೆಲೆ ಅಂಗಡಿ ಯವರು ವಿಫಲವಾದ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ.

ಮನೆಯಲ್ಲಿ ಒಬ್ಬರು/ಇಬ್ಬರು ಹಿರಿಯ ನಾಗರಿಕರಿದ್ದರೆ ಅವರ ಮನೆ ಬಾಗಿಲಿಗೆ ನ್ಯಾಯಬೆಲೆ ಅಂಗಡಿಯ ಸಿಬಂದಿ/ನೌಕರರು ಹೋಗಿ ತಿಂಗಳ ಪಡಿತರ ನೀಡಬೇಕು. ಆದರೆ, ನಾಲ್ಕು ತಿಂಗಳಾದರೂ ಈ ವ್ಯವಸ್ಥೆ ಸರಿಯಾಗಿ ಜಾರಿಗೆ ಬಂದಿಲ್ಲ.

2025ರ ನವೆಂಬರ್‌ನಲ್ಲಿ ರಾಜ್ಯ ಸರಕಾರ ಸುವಿಧಾ ಎಂಬ ಹೆಸರಿನಲ್ಲಿ ಹಿರಿಯ ನಾಗರಿಕರ ಮನೆಗೆ ಪಡಿತರ ತಲುಪಿಸುವ ಯೋಜನೆ ಜಾರಿ ಮಾಡಿದೆ. ತಲುಪಿಸುವ ಹೊಣೆಗಾರಿಕೆಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿದೆ. ಆದರೆ, ಬೆರಳೆಣಿಕೆಯಷ್ಟು ಹಿರಿಯ ನಾಗರಿಕರು ಮಾತ್ರ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರಯೋಜನ ಪಡೆಯುವುದು ಹೇಗೆ?

ಬಿಪಿಎಲ್‌ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಲ್ಲಿ ಒಬ್ಬರು ಅಥವಾ ಇಬ್ಬರು (ಇಬ್ಬರು 75 ವರ್ಷ ಮೇಲ್ಪಟ್ಟವ ರಾಗಿರಬೇಕು) ಇದ್ದಲ್ಲಿ ಅವರು ಒಮೆ-¾ ತಮ-¾ ನ್ಯಾಯಬೆಲೆ ಅಂಗಡಿಗೆ ಹೋಗಿ ಈ ಸಂಬಂಧ ನೋಂದಣಿ ಮಾಡಿ ಕೊಂಡು ಒಪಿಡಿ ಮೂಲಕ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಬಳಿಕ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯ ಸಿಬಂದಿ / ನೌಕರರು ಅವರ ಮನೆಗೆ ಬಂದು ಪಡಿತರ ನೀಡಿ, ಬೆರಳಚ್ಚು ಪಡೆದು ಕೊಂಡು ಹೋಗುತ್ತಾರೆ. ಆದರೆ ಪಡಿತರ ನೀಡಲು ಬರುವಾಗ ನೀವು ಮನೆಯಲ್ಲಿ ಇರುವುದನ್ನು ಮೊದಲೇ ಖಚಿತಪಡಿಸಬೇಕು.

ಯೋಜನೆ ಬಗ್ಗೆ ನಿರಾಸಕ್ತಿ ಯಾಕೆ?

ಈ ಯೋಜನೆ ಅನುಷ್ಠಾನದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲಕ ರದ್ದೇ ಪ್ರಧಾನ ಜವಾಬ್ದಾರಿ. ಅರ್ಹ ಫಲಾನು ಭವಿಗಳ ಮನೆಗೆ ಪಡಿತರ ತಲುಪಿಸಿದಾಗ ತಲಾ 50 ರೂ. ಸರಕಾರದಿಂದ ನೀಡ ಲಾಗುತ್ತದೆ. ಆದರೆ 50 ರೂ.ಗಳಲ್ಲಿ ಈ ಸೇವೆ ನೀಡಲು ಸಾಧ್ಯವಿಲ್ಲ. ಕೆಲವು ಮನೆಗಳು ದೂರ ಇರುತ್ತವೆ. ಇನ್ನು ಕೆಲವೆಡೆ ನಿರ್ದಿಷ್ಟ ಸಮಯದಲ್ಲಿ ಫಲಾನುಭವಿ ಗಳು ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ಎರಡು ಮೂರು ಬಾರಿ ಹೋಗಿ ಬರ ಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಹೊರೆಯಾಗುತ್ತದೆ. ಆದ್ದರಿಂದ ಈ ಮೊತ್ತ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟಿದ್ದಾರೆ.

5,006 ಅರ್ಹ ಫಲಾನುಭವಿಗಳು

ಅವಿಭಜಿತ ದ. ಕ. ಜಿಲ್ಲೆಯಲ್ಲಿ 5,006 ಅರ್ಹ ಫಲಾನುಭವಿಗಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2,431 ಹಾಗೂ ದ. ಕ. ಜಿಲ್ಲೆಯಲ್ಲಿ 2,575 ಹಿರಿಯ ನಾಗರಿಕರು 75 ವರ್ಷ ಮೇಲ್ಪಟ್ಟವರಿದ್ದು, ಇವರೆಲ್ಲರೂ ಸುವಿಧಾ ಯೋಜನೆಯಡಿ ಸೇವೆ ಪಡೆಯಲು ಅರ್ಹರಿದ್ದಾರೆ. ಆದರೆ, ಫೆಬ್ರವರಿಯ ಪಡಿತರ 25 ಫಲಾನುಭವಿಗಳಿಗೆ ಮಾತ್ರ ತಲುಪಿದೆ. ಉಳಿದವರು ನ್ಯಾಯಬೆಲೆ ಅಂಗಡಿಗೆ ಹೋಗಿ ರೇಷನ್ ಪಡೆದುಕೊಂಡಿದ್ದಾರೆ.

ತಾಲೂಕು ಅರ್ಹ ಫಲಾನುಭವಿಗಳು

ಕಾರ್ಕಳ 485

ಕುಂದಾಪುರ 409

ಉಡುಪಿ 372

ಕಾಪು 360

ಬ್ರಹ್ಮಾವರ 415

ಬೈಂದೂರು 252

ಹೆಬ್ರಿ 138

ಬೆಳ್ತಂಗಡಿ 378

ಬಂಟ್ವಾಳ 419

ಮಂಗಳೂರು 632

ಪುತ್ತೂರು 199

ಸುಳ್ಯ 162

ಮೂಡಬಿದಿರೆ 217

ಕಡಬ157

ಮೂಲ್ಕಿ 206

ಉಳ್ಳಾಲ 205


Share with

Leave a Reply

Your email address will not be published. Required fields are marked *