ಕರ್ನಾಟಕ ವಿದ್ಯುತ್ ನಿಗಮದ (KPCL) 622 ಹುದ್ದೆಗಳ ನೇಮಕಾತಿಗೆ ಇದೆ ಡಿ.27, 28ರಂದು ಮರು ಪರೀಕ್ಷೆ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಡಿ.27ರಂದು ಕೆಮಿಕಲ್ ಸೂಪರ್ ವೈಸರ್, ವಿವಿಧ ವಿಭಾಗಗಳ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಮತ್ತು ಡಿ.28ರಂದು ಕೆಮಿಸ್ಟ್, ವಿವಿಧ ವಿಭಾಗಗಳ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಬೆಂಗಳೂರಿನ ಹಲವು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.




