ಉಪ್ಪಳ : ಬೇಕೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಾಚನಾ ವಾರಾಚರಣೆ ಸಮಾರೋಪ- ವಿವಿಧ ಕ್ಲಬ್ ಗಳ ಉದ್ಘಾಟನಾ ಸಮಾರಂಭ ವಿವಿಧ ವಿನೂತನ ಚಟುವಟಿಕೆಗಳ ಮೂಲಕ ಬಹಳ ಅಚ್ಚು ಕಟ್ಟಾಗಿ 27.6.2024ರಂದು ನಡೆಯಿತು .ಸಾಹಿತಿ,ಕಲಾವಿದ ಹಾಗೂ ಶಿಕ್ಷಕ ದಿವಾಕರ್ ಬಲ್ಲಾಳ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಓದಿನ ಬಗ್ಗೆ ಮಹತ್ವದ ಅರಿವನ್ನು ತಿಳಿಸುತ್ತಾ ನಮ್ಮನ್ನು ಸುಶ್ರಾವ್ಯ ವಾದ ಜನಪದ ಹಾಡಿನೊಂದಿಗೆ ಮನರಂಜಿಸಿದರು. “ಎಲ್ಲರೂ ಓದುವಂತಾಗಬೇಕು ಓದು ನಿರಂತರವಾದ ಪ್ರಕ್ರಿಯೆಯಾಗಿದ್ದು ಆ ಮೂಲಕ ಜ್ಞಾನಗಳಿಸುವಂತಾಗಬೇಕು” ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು .ಈ ಸಂದರ್ಭದಲ್ಲಿ ಲಿಟಲ್ ಕೈಟ್ಸ್ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ನೂತನ ಸಮವಸ್ತ್ರವನ್ನು ಬಿಡುಗಡೆಗೊಳಿಸಲಾಯಿತು. ಪಿಟಿಎ ಅಧ್ಯಕ್ಷ ಅಶ್ರಫ್ ಶುಭ ಹಾರೈಸಿದರು. ಮುಖ್ಯ ಅತಿಥಿಯಾದ ವಿಶ್ವನಾಥ ಸರ್ ಅವರು ವಾಚನ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಂದ ರಚಿತಗೊಂಡ ‘ಸ್ಪಂದನ ‘ಡಿಜಿಟಲ್ ಹಸ್ತಪತ್ರಿಕೆ ಬಿಡುಗಡೆ ಮಾಡಿ ಓದುವಿಕೆ ಮನುಷ್ಯನ ಜೀವನದಲ್ಲಿ ಬಿಡಲಾಗದ ಬಂಧ ಎಂದು ಅಭಿಪ್ರಾಯ ಪಟ್ಟರು.ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಎಂ ಎ ಅವರು ವಾಚನಾ ಸಪ್ತಾಹದ ಮಹತ್ವವನ್ನು ಹೇಳಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು .ನಯನ ಟೀಚರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿನಿಯಾದ ಲಿಬಾ ಫಾತಿಮ ಕಾರ್ಯಕ್ರಮವನ್ನು ನಿರೂಪಿಸಿದಳು. ವಾಚನ ಸಪ್ತಾಹದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಓದಿನ ಮಹತ್ವವನ್ನು ಸಾರುವ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಹಿರಿಯ ಅಧ್ಯಾಪಕಿ ಭಾಗ್ಯ ಲಕ್ಷ್ಮಿ ಟೀಚರ್ ವಂದಿಸಿದರು.