ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಬ ಇಲ್ಲಿಗೆ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮುತುವರ್ಜಿಯಲ್ಲಿ ಶಾಲೆಯ ಮನವಿಗೆ ಕೂಡಲೆ ಸ್ಪಂದಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ವಿಭಾಗದ ಧರ್ಮಸ್ಥಳ ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಆನಂದ ಸುವರ್ಣ ಹಾಗೂ ಯೋಜನಾಧಿಕಾರಿ ಪುಷ್ಪರಾಜ್ ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾರವರಿಂದ ಮಾಹಿತಿ ಪಡೆದುಕೊಂಡು ಶಾಲೆಯ ಬೇಡಿಕೆಗೆ ಪೂರಕ ಸ್ಪಂದನೆ ನೀಡಿದರು.


ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ಶೌರ್ಯ ವಿಪತ್ತು ತಂಡದ ಸದಸ್ಯ ಶ್ರೀಮತಿ ತುಳಸಿ ಹಾಗೂ ಚಿನ್ನಾ ಕಲ್ಲಡ್ಕ ಜೊತೆಗಿದ್ದರು.




