ಉಪ್ಪಳ: ಶ್ರೀ ಕೃಷ್ಣ ಭಜನಾ ಸಂಘ ಕೃಷ್ಣನಗರ ಮಂಗಲ್ಪಾಡಿ ಇದರ 48ನೇ ವರ್ಷದ ಭಜನಾ ವಾರ್ಷಿಕೋತ್ಸವ ಹಾಗೂ ಪೂರ್ಣ ಮಂಡಲ ಪ್ರಯುಕ್ತ ಭಗವದ್ ಕೃಪಾ ಪ್ರಾಪ್ತಿಗಾಗಿಯೂ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭ ಸಭೆಯಲ್ಲಿ ರಘು ಚೆರುಗೋಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಚೆನ್ನನಹಳ್ಳಿ ಜನಸೇವ ವಿದ್ಯಾಕೇಂದ್ರದ ಪ್ರಾಧ್ಯಾಪಕರು, ಯುವ ವಾಗ್ಮಿ ಅರುಣ್‌ರಾಜ್ ಅಂಬಾರು ಧಾರ್ಮಿಕ ಉಪನ್ಯಾಸ ನೀಡಿದರು. ಭಜನೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಬೀರಿಗುಡ್ಡೆ ಅಧ್ಯಕ್ಷತೆ ವಹಿಸಿದರು. ಮಂಗಳೂರು ಕ್ಯಾಂಪ್ಕೊ ನಿರ್ಧೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಗಲ್ಪಾಡಿ ಮನೆ ಯಜಮಾನ ಡಾ.ಕೌಶಿಕ್ ಶೆಟ್ಟಿ ಮಂಗಲ್ಪಾಡಿ, ಕೈಕಂಬ ಹಿತ ಕ್ಲೀನಿಕ್ನ ಡಾ.ಪ್ರವೀಣ್ ಕುಮಾರ್.ಜೆ, ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರ ಎಚ್.ಕೆ ಶೆಟ್ಟಿ ಚೆರುಗೋಳಿ, ಜಗದೀಶ ಬೆಳಂದೂರು, ಮಂಜೇಶ್ವರ ಉಪ ನೊಂದಾವಣೆ ಇಲಾಖೆಯ ಹರೀಶ.ಯಂ, ಬೇಕೂರು ಸರಕಾರಿ ಶಾಲೆಯ ಪ್ರಾಧ್ಯಾಪಕ ವಿಶ್ವನಾಥ.ಒ, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಧಾಗಣೇಶ, ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಿಜಯ್.ಕೆ.ಆರ್, ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ರಾಮ.ಯಂ, ಶ್ರೀ ಕೃಷ್ಣ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗಿ ಅಂಬಾರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ಕುಮಾರಿ ರಂಜಿತ ಎಮ್.ಮಾಡೂರು, ಖ್ಯಾತ ತಬಲ ವಾದಕ ಸ್ವರಾಜ್ ಶಿವ ಮಂಗಲ್ಪಾಡಿ, ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರವೀಂದ್ರ ಅಂಬಾರು ಇವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ನೃತ್ಯ ವೈವಿಧ್ಯ ನಡೆಯಿತು. ಮಂಜುನಾಥ ಸ್ವಾಗತಿಸಿ, ದಿನೇಶ ಚೆರುಗೋಳಿ ವಂದಿಸಿದರು. ರವೀಂದ್ರ ನಿರೂಪಿಸಿದರು.