ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ಲಿ ಬಾಬು (50) ನಿಧನರಾಗಿದ್ದಾರೆ. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ರಾಕ್ಷಸನ್, ಓ ಮೈ ಗಾಡ್, ಬ್ಯಾಚುಲರ್ ಮುಂತಾದ ಅನೇಕ ಯಶಸ್ವಿ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ. ಆಕ್ಸೆಸ್ ಫಿಲ್ಡ್ ಫ್ಯಾಕ್ಟರಿಯ ಬ್ಯಾನರ್ ಅಡಿಯಲ್ಲಿ ಅವರು ನಿರ್ಮಿಸಿದ ಮೀರಲ್ ಮತ್ತು ಮರಕತಮಣಿ ಇತರ ಭಾಷೆಯಲ್ಲೂ ಬಿಡುಗಡೆಯಾಗಿದ್ದವು. ಅವರ ನಿಧನಕ್ಕೆ ಸೆಲಬ್ರೆಟಿಗಳು ಸಂತಾಪ ಸೂಚಿಸಿದ್ದಾರೆ